ನವದೆಹಲಿ: ಬುಧವಾರ ಜಮ್ಮು ಕಾಶ್ಮೀದರ ಉಧಮ್ಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿ ಹುತಾತ್ಮರಾದ ಬಿಎಸ್ಎಫ್ ಯೋಧರಾದ ಸುಭೇಂದು ರಾಯ್ ಮತ್ತು ಕಾನ್ಸ್ಸ್ಟೇಬಲ್ ರಾಕಿ ಅವರ ಪಾರ್ಥಿವ ಶರೀರವನ್ನು ನವದೆಹಲಿಗೆ ಕರೆತರಲಾಗಿದ್ದು, ತ್ರಿವರ್ಣ ಧ್ವಜ ಹೊದಿಸಿ ಗೌರವ ವಂದನೆ ಸಲ್ಲಿಸಲಾಯಿತು.
ಉಧಮ್ಪುರದ ಹೈವೇಯಲ್ಲಿ ಸಾಗುತ್ತಿದ್ದ ಬಿಎಸ್ಎಫ್ ಬಸ್ನ ಮೇಲೆ ಪಾಕಿಸ್ಥಾನಿ ಮೂಲದ ಉಗ್ರರು ಗುಂಡಿನ ದಾಳಿ ನಡೆಸಲು ಮುಂದಾಗಿದ್ದು, ಈ ಮೇಲೆ ಕಾರ್ಯಪ್ರವೃತ್ತರಾದ ಬಸ್ನೊಳಗಿದ್ದ ಈ ಯೋಧರು ತಮ್ಮ ಸ್ವರಕ್ಷಣೆಯತ್ತ ಗಮನ ನೀಡದೆಯೇ ಉಗ್ರರ ಪ್ರಯತ್ನವನ್ನು ತಡೆದರು. ಈ ವೇಳೆ ನಡೆದ ಚಕಮಕಿಯಲ್ಲಿ ವೀರ ಮರಣವನ್ನಪ್ಪಿದ್ದಾರೆ.
ಸುಭೇಂದು ರಾಯ್ ಬಸ್ನ್ನು ಚಲಾವಣೆ ಮಾಡುತ್ತಿದ್ದರು ಎನ್ನಲಾಗಿದೆ, ಬಸ್ನಲ್ಲಿ ಒಟ್ಟು 30 ಯೋಧರಿದ್ದರು.
ಹೊಸದಾಗಿ ಕೆಲಸಕ್ಕೆ ಸೇರಿದ್ದ 27 ವರ್ಷದ ರಾಕಿ ಉಗ್ರರ ವಿರುದ್ಧ ಗುಂಡು ಹಾರಿಸುವಾಗ ಬಲಿಯಾಗಿದ್ದಾರೆ, ಆದರೂ ನೋಮನ್ ಎಂಬ ಉಗ್ರನನ್ನು ಇವರು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನೆದೆಗೆ ಗುಂಡು ತಗಲಿ ಪ್ರಜ್ಞೆ ತಪ್ಪಿ ಬೀಳುವ ಕೊನೆಯವರೆಗೂ ರಾಕಿ ಹೋರಾಡುತ್ತಲೇ ಇದ್ದರು.
ಈ ವೀರ ಯೋಧರಿಬ್ಬರ ಪಾರ್ಥಿವ ಶರೀರಕ್ಕೆ ಇಂದು ಅಂತಿಮ ನಮನ ಸಲ್ಲಿಸಲಾಗಿದ್ದು, ಅವರವರ ಊರಿಗೆ ಪಾರ್ಥಿವ ಶರೀರವನ್ನು ಇಂದು ಕೊಂಡೊಯ್ಯಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.