ನವದೆಹಲಿ: ದುಡಿದು ತಿನ್ನುವವರಿಗಿಂತ ತಲೆ ಹೊಡೆದು ತಿನ್ನುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕ ಬರೋಬ್ಬರಿ 90 ಸಾವಿರ ರೂಪಾಯಿ ಹಣವನ್ನು ಪೊಲೀಸ್ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಉತ್ತರಪ್ರದೇಶದ ಇಸನಗರ್ನಲ್ಲಿ ವಯಸ್ಸಾದ ದುಡಿದು ತಿನ್ನುವ ಕೂಲಿ ಕಾರ್ಮಿಕರೊಬ್ಬರಿಗೆ ರಸ್ತೆಯಲ್ಲಿ 90 ಸಾವಿರ ರೂಪಾಯಿಯ ನೋಟಿನ ಕಂತೆ ದೊರೆತಿದೆ. ಸ್ವತಃ ಬಡವನಾಗಿ ಜೀವನ ಸಾಗಿಸುತ್ತಿದ್ದರೂ ಸಿಕ್ಕ ಹಣದಲ್ಲಿ ಒಂದೇ ಒಂದು ರೂಪಾಯಿಯನ್ನೂ ಮುಟ್ಟದೆ ಪೊಲೀಸರಿಗೆ ತಂದೊಪ್ಪಿಸಿದ್ದಾರೆ.
ಬಳಿಕ ವಿಚಾರಣೆ ನಡೆಸಿದಾಗ ಈ ಹಣ ಇಸನಗರದ ವ್ಯಕ್ತಿಗೇ ಸೇರಿದ್ದು ಎಂಬುದು ತಿಳಿದು ಬಂದಿದೆ. ಅವರು ಬೆಳಿಗ್ಗೆ ದುರ್ಗೇಶ್ ಬ್ಯಾಂಕಿನಿಂದ ಹಣ ತೆಗೆದುಕೊಂಡು ಅದನ್ನು ಕಾರಿನ ಹಿಂಬದಿಯ ಸೀಟಿನಲ್ಲಿ ಇಟ್ಟಿದ್ದಾರೆ. ದುರ್ಗಮ ರಸ್ತೆಯಲ್ಲಿ ಸಾಗುವಾಗ ಹಣ ರಸ್ತೆಗೆ ಬಿದ್ದಿದೆ.
ಅದೇ ರಸ್ತೆಯಲ್ಲಿ ಕೆಲವೊಂದು ಭಿಕ್ಷುಕರು ಅಡ್ಡಾಡುತ್ತಿದ್ದರು, ಅವರು ಆ ಹಣವನ್ನು ದೋಚುತ್ತಾರೆ ಎಂದು ತಿಳಿದಿದ್ದ ಪ್ರಾಮಾಣಿಕ ಕೂಲಿ ಕಾರ್ಮಿಕರೊಬ್ಬರು ಹಣವನ್ನು ಪೊಲೀಸರಿಗೆ ವಾಪಾಸ್ ಮಾಡಿದ್ದಾರೆ.
ಅವರ ಈ ಪ್ರಾಮಾಣಿಕತೆಯನ್ನು ಮೆಚ್ಚಿ ಪೊಲೀಸರು ಅವರಿಗೆ 7 ಸಾವಿರ ರೂಪಾಯಿ ಉಡುಗೊರೆಯಾಗಿ ನೀಡಿದ್ದಾರೆ, ಅಲ್ಲದೇ ಹೊಸ ಬಟ್ಟೆ ಮತ್ತು ಪಂಚೆ ನೀಡಿ ಗೌರವಿಸಿದ್ದಾರೆ. ತನ್ನ ಬಳಿ ಹಣವಿಲ್ಲದಿದ್ದರೂ ಬೇರೆಯವರ ಹಣಕ್ಕೆ ಆಸೆ ಪಡದ ಇವರಂತಹ ವ್ಯಕ್ತಿಗಳಿಗೆ ನಾವು ಹ್ಯಾಟ್ಸ್ ಆಫ್ ಹೇಳಲೇ ಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.