ರಮನಾಥಪುರಂ: ವಿದ್ಯುತ್ ಸಂಪರ್ಕವೇ ಇಲ್ಲದ ಅನಕ್ಷರಸ್ಥ ದಂಪತಿಗಳಿಗೆ ಎಲೆಕ್ಟ್ರಿಸಿಟಿ ಬೋರ್ಡ್ ಮೂರು ತಿಂಗಳ ವಿದ್ಯುತ್ ಬಿಲ್ ನೀಡಿದ ಘಟನೆ ತಮಿಳುನಾಡಿನ ರಮನಾಥಪುರಂನಲ್ಲಿ ಮಾಡಿದೆ.
ಈ ದಂಪತಿಗಳು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಹಾಕಿದ್ದರು, ಅದಕ್ಕಾಗಿ ಆರು ಸಾವಿರ ರೂಪಾಯಿ ಹಣ ಎತ್ತಿಟ್ಟಿದ್ದರು. ಎಲೆಕ್ಟ್ರಿಸಿಟಿ ಬೋರ್ಡ್ ಅವರು ಬಂದು ಇವರ ಮನೆಗೆ ಮೀಟರ್ ಅಳವಡಿಸಿದ್ದಾರೆ. ಅಲ್ಲದೇ ಅವರ ಮನೆ ಸಮೀಪ ಎಲೆಕ್ಟ್ರಿಸಿಟಿ ಪೋಸ್ಟ್ ಆದ ಬಳಿಕ ಮನೆಗೆ ವಿದ್ಯುತ್ ಸಂಪರ್ಕ ಸಿಗುತ್ತದೆ ಎಂದು ಹೇಳಿಹೋಗಿದ್ದರು.
ಆದರೆ ಇದುವರೆಗೆ ಅವರಿಗೆ ವಿದ್ಯುತ್ ಸಂಪರ್ಕ ಬಂದಿಲ್ಲ, ಆದರೂ ಎಪ್ರಿಲ್ನಲ್ಲಿ ಇವರಿಗೆ ಕನಿಷ್ಠ ಬಿಲ್ ೮೬ ರೂಪಾಯಿ ಬಂದಿದೆ. ಜೂನ್ನಲ್ಲಿ 110ರೂಪಾಯಿ ಬಿಲ್ ಬಂದಿದೆ, ಇದನ್ನು ಇವರು ಪಾವತಿಸಿದ್ದಾರೆ. ಆ ಬಳಿಕವೂ ವಿದ್ಯುತ್ ಸಂಪರ್ಕ ಬಂದಿಲ್ಲ.
ಬಳಿಕ ನೆರೆಹೊರೆಯವರ ಸಹಾಯದೊಂದಿಗೆ ಇವರು ಎಲೆಕ್ಟ್ರಿಸಿಟಿ ಬೊರ್ಡ್ಗೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ, ಇದೀಗ ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಬೋರ್ಡ್ ತಪ್ಪು ಸರಿಪಡಿಸುವುದಾಗಿ ಭರವಸೆ ನೀಡಿದೆ.
ಒಟ್ಟಿನಲ್ಲಿ ಎಲೆಕ್ಟ್ರಿಸಿಟಿ ಬೋರ್ಡ್ ಮಾಡಿದ ತಪ್ಪಿನಿಂದಾಗಿ ಅನಕ್ಷರಸ್ಥ ದಂಪತಿ ವಿದ್ಯುತ್ ಇಲ್ಲದೆಯೇ ವಿದ್ಯುತ್ ಬಿಲ್ ಪಾವತಿಸಬೇಕಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.