ನವದೆಹಲಿ: ಪ್ರಮುಖ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿಗೆ ಭೇಟಿ ನೀಡುವ ಸಲುವಾಗಿ ಸುಮಾರು 80 ರಾಷ್ಟ್ರಗಳ ರಾಯಭಾರಿಗಳು ಮತ್ತು ಹೈ ಕಮಿಷನರ್ಗಳ ತಂಡ ಹೈದರಾಬಾದಿಗೆ ಈ ತಿಂಗಳ 9ನೇ ತಾರೀಕಿನಂದು ಭೇಟಿಯನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಹೈ ಪ್ರೊಫೈಲ್ ಭೇಟಿಯನ್ನು ಆಯೋಜನೆಗೊಳಿಸುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಕೆಲವೊಂದು ಪ್ರಮುಖ ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ರಾಯಭಾರಿಗಳಿಗೆ ಪರಿಚಯ ಮಾಡಿಕೊಡುವ ಸಲುವಾಗಿ ಈ ಭೇಟಿಯನ್ನು ಆಯೋಜನೆಗೊಳಿಸಲಾಗಿದೆ.
ಗಣ್ಯರ ತಂಡ ಭಾರತ್ ಬಯೋಟೆಕ್ ಲಿಮಿಟೆಡ್ ಮತ್ತು ಇ ಬಯೋಲಾಜಿಕಲ್ಸ್ ಲಿಮಿಟೆಡ್ಗೆ ಭೇಟಿಯನ್ನು ನೀಡಲಿದೆ. ಈ ಸಂಸ್ಥೆಗಳು ದೇಶದಲ್ಲಿ ಕೋವಿಡ್- 19 ಲಸಿಕೆಯನ್ನು ಉತ್ಪಾದಿಸುವಲ್ಲಿ ನಿರತವಾಗಿವೆ. ಲಸಿಕೆಯ ಉತ್ಪಾದನೆ ಮತ್ತು ಪೂರೈಕೆ ಮಾಡುವಲ್ಲಿ ದೇಶದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಪ್ರಸಂಟೇಶಅನ್ ಅನ್ನು ಕೂಡ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.