ನವದೆಹಲಿ: ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವೆ ಕರೋನವೈರಸ್ ಲಸಿಕೆಯನ್ನು ಕೂಡ ನಕಲಿ ಮಾಡಲು ಕ್ರಿಮಿನಲ್ ಜಗತ್ತು ಕಾಯುತ್ತಿದೆ. ಈ ಬಗ್ಗೆ ಇಂಟರ್ಪೋಲ್ ಎಚ್ಚರಿಕೆಯನ್ನು ರವಾನಿಸಿದೆ.
ತನ್ನ 194 ಸದಸ್ಯ ರಾಷ್ಟ್ರಗಳಿಗೆ ಬುಧವಾರ ಆರೆಂಜ್ ನೋಟಿಸ್ ನೀಡಿರುವ ಇಂಟರ್ಪೋಲ್, “ಕರೋನ ವೈರಸ್ ಲಸಿಕೆ ಹಾಗೂ ಶೀತ ಜ್ವರಕ್ಕೆ ಇರುವ ಲಸಿಕೆಗಳ ಅಕ್ರಮ ಜಾಹೀರಾತು, ಲಸಿಕೆ ಕಳ್ಳತನ ಮತ್ತು ಲಸಿಕೆಯನ್ನು ನಕಲಿಯಾಗಿ ತಯಾರಿಸುವಂತಹ ಅಪರಾಧ ಚಟುವಟಿಕೆಯ ಮೇಲೆ ನಿಗಾ ಇರಿಸಿ” ಎಂದು ಕಿವಿಮಾತು ಹೇಳಿದೆ.
“ಲಸಿಕೆಯನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಅಗತ್ಯ. ನಕಲಿ ಲಸಿಕೆ ಮಾರಾಟ ಮಾಡುವ ವೆಬ್ಸೈಟ್ಗಳ ಮೇಲೆ ನಿಗಾ ಇರಿಸಬೇಕು. ನಕಲಿ ವೆಬ್ಸೈಟ್ಗಳು ಈ ಲಸಿಕೆಯಿಂದ ಸೋಂಕು ಬರುವುದಿಲ್ಲ ಎನ್ನುವ ಭರವಸೆಯನ್ನು ನೀಡಿ ನಕಲಿ ಲಸಿಕೆ ಮಾರಾಟ ಮಾಡುವ ಅಪಾಯವಿದೆ. ಇದು ಜನರ ಆರೋಗ್ಯಕ್ಕೆ ಕುತ್ತು ತರಬಹುದು” ಎಂದು ಇಂಟರ್ಪೋಲ್ ಪೊಲೀಸ್ ಸಂಸ್ಥೆಗಳಿಗೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.