ಬೆಂಗಳೂರು: ಡಿಆರ್ಡಿಒ ಲ್ಯಾಬ್ನಲ್ಲಿ ಸಹಾಯಕ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುವ ವಿನೋದ್ ಅವರು ಮಾದರಿ ಕೆಲಸವೊಂದನ್ನು ತಮ್ಮ ಸ್ನೇಹಿತರ ಜೊತೆಗೂಡಿ ಆರಂಭ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಮರಗಳಿಗೆ ಹಚ್ಚಲಾಗಿರುವ ಪೋಸ್ಟರ್ಗಳು, ಪಿನ್ಗಳನ್ನು, ಸ್ಟಿಕ್ಕರ್ಗಳನ್ನು ತೆಗೆಯುವ ಮೂಲಕ ಪರಿಸರ ಸ್ನೇಹಿ ಕ್ರಮವೊಂದಕ್ಕೆ ಮುಂದಾಗಿದ್ದಾರೆ. ಭಾನುವಾರದಂದು ತಮ್ಮ 5 ಮಂದಿ ಸ್ನೇಹಿತರ ಜೊತೆಗೂಡಿ ಮರಗಳಲ್ಲಿರುವ ಪೋಸ್ಟರ್, ಸ್ಟಿಕ್ಕರ್ಗಳನ್ನು, ಪಿನ್ನ್ಗಳನ್ನು ತೆಗೆಯುವ ಕೆಲಸವನ್ನು ನಡೆಸುತ್ತಿರುವುದಾಗಿ ವಿನೋದ್ ತಮ್ಮ ಈ ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿನೋದ್ ಅವರ ಮಾತಿನಲ್ಲಿ ಹೇಳುವುದಾದರೆ, ಮರಗಳ ಮೇಲೆ ಪೋಸ್ಟರ್, ಸ್ಟಿಕ್ಕರ್ಗಳನ್ನು ಹಚ್ಚುವುದು ಮುನ್ಸಿಪಲ್ ಆಕ್ಟ್ನ ಪ್ರಕಾರ ಕಾನೂನು ಬಾಹಿರವಾಗಿದೆ. ಹೀಗೆ ಪಿನ್ ಬಳಸಿ ಪೋಸ್ಟರ್ ಹಚ್ಚಿರುವ, ಸ್ಟಿಕ್ಕರ್ಗಳನ್ನು ಹಚ್ಚಿರುವ ಮರಗಳನ್ನು ನೋಡುವಾಗ ಬೇಸರವಾಗುತ್ತಿತ್ತು. ಕಾನೂನು ಬಾಹಿರವಾಗಿದ್ದರೂ ನಮ್ಮ ಏರಿಯಾದಲ್ಲಿರುವ ಮರಗಳಲ್ಲಿ 1000-2000 ಗಳಿಗೂ ಅಧಿಕ ಪಿನ್ಗಳನ್ನು ಚುಚ್ಚಲಾಗಿತ್ತು. ಇವೆಲ್ಲವುಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸ್ನೇಹಿತರ ಸಹಾಯದಿಂದ ಪ್ರತಿ ಭಾನುವಾರ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಹಾಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಮರಗಳಿಂದ ಪೋಸ್ಟರ್, ಸ್ಟಿಕ್ಕರ್, ಪಿನ್ ಗಳನ್ನು ತೆರವು ಮಾಡಿದ ಬಳಿಕ ಆ ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿದೆ ಎಂದು ವಿನೋದ್ ತಿಳಿಸಿದ್ದಾರೆ. ಅಲ್ಲದೆ ಹಲವರಿಗೆ ಇಂತಹ ಕೆಲಸಗಳಿಗೆ ತೊಡಗಿಸಿಕೊಳ್ಳುವಲ್ಲಿ ಇದು ಪ್ರೇರಣೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Karnataka: Vinod Kartavya, an assistant scientist at a DRDO lab, along with his 5 friends has taken up an initiative to remove nails, posters & stickers from trees in Bengaluru.
He says, “We do this every Sunday. I felt bad, all trees in my locality had 1000-2000 pins on them.” pic.twitter.com/VDgohJcIMW
— ANI (@ANI) December 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.