ತುಮಕೂರು: ಇತ್ತೀಚೆಗಷ್ಟೇ ನಡೆದಿದ್ದ ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷ ಅಲ್ಲಿನ ಜನತೆಗೆ ನೀಡಿದ್ದ ವಾಗ್ದಾನವನ್ನು ಪೂರೈಸಿದೆ.
ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಂದಿನ ಆರು ತಿಂಗಳೊಳಗಾಗಿ ಹೇಮಾವತಿಯ ನೀರನ್ನು ಮದಲೂರು ಕೆರೆಗೆ ಹರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದರು. ಅದರಂತೆ ಇದೀಗ ಹೇಮಾವತಿಯ ನೀರನ್ನು ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹರಿಸುವ ಮೂಲಕ ಸಾರ್ವಜನಿಕರ 40 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.
ಉಪಚುನಾವಣೆ ಮುಗಿದ ಬಳಿಕ ಶಿರಾದ ಶಾಸಕ ರಾಜೇಶ್ ಗೌಡ, ಅಧಿಕಾರಿಗಳ ಜೊತೆ ತೆರಳಿ ಮದಲೂರು ಕೆರೆಯ ಪರಿಶೀಲನೆ ನಡೆಸಿದ್ದರು. ಜೆಸಿಬಿ ಯಂತ್ರಗಳ ಮೂಲಕ 34 ಕಿಮೀ ಕಾಲುವೆಯಲ್ಲಿದ್ದ ಕಳೆ ತೆಗೆಸಿ, ನೀರು ಸರಾಗವಾಗಿ ಹರಿಯಲು ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿದ್ದರು.
ಇದೀಗ ಮದಲೂರು ಕೆರೆ ಮತ್ತೆ ಉಪಯೋಗ ಪೂರ್ಣವಾಗಿದ್ದು, ಶಾಸಕ ರಾಜೇಶ್ ಗೌಡ, ಸಂಸದ ಆನೇಕಲ್ ನಾರಾಯಣ್ ಸ್ವಾಮಿ ಮೊದಲಾದ ಗಣ್ಯರು ಗಂಗಾಪೂಜೆ ನೆರವೇರಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.