ನವದೆಹಲಿ: ಟ್ವಿಟರ್ಗೆ ಭಾರತದ ಪರ್ಯಾಯ ಎಂದು ಕರೆಯಲಾಗುತ್ತಿರುವ ʼಟೂಟರ್ʼನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖಾತೆಯನ್ನು ತೆರೆದಿದ್ದಾರೆ. ಪಿಎಂ ಮೋದಿ ಈ ಮೈಕ್ರೋ ಬ್ಲಾಗಿಂಗ್ ಸೈಟ್ಗೆ ಸೇರ್ಪಡೆಗೊಂಡ ನಂತರ, ‘ಟೂಟರ್’ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರಲ್ಲಿ ಕುತೂಹಲ ಮೂಡಿದೆ ಎಂದರೆ ತಪ್ಪಾಗಲಾರದು.
ಟೂಟರ್ ಅನ್ನು ಸ್ವಲ್ಪಮಟ್ಟಿನ ವ್ಯತ್ಯಾಸದೊಂದಿಗೆ ‘ಟ್ವಿಟರ್’ ಮಾದರಿಯಲ್ಲೇ ರೂಪಿಸಲಾಗಿದೆ. ಅಪ್ಲಿಕೇಶನ್ ಮತ್ತು ವೆಬ್ ಮೂಲಕ ಇದನ್ನು ಪ್ರವೇಶಿಸಬಹುದು. ಟೂಟರ್ ಒಂದು ಸ್ವದೇಶಿ ಸಾಮಾಜಿಕ ನೆಟ್ವರ್ಕ್. ಟೂಟರ್ನಲ್ಲಿ ನಾವು ಖಾತೆಯನ್ನು ಸೃಷ್ಟಿಸಬಹುದು ಮತ್ತು ಟೆಕ್ಸ್ಟ್, ಚಿತ್ರಗಳು, ವೀಡಿಯೊಗಳು ಇತ್ಯಾದಿಗಳನ್ನು ಒಳಗೊಂಡಿರುವ ಟೂಟ್ಸ್ ಎಂಬ ಕಿರು ಸಂದೇಶಗಳನ್ನು ಪೋಸ್ಟ್ ಮಾಡಬಹುದು.
ನಾವು ಇದರಲ್ಲಿ ಯಾರನ್ನು ಬೇಕಾದರೂ ಫಾಲೋ ಮಾಡಬಹುದು ಮತ್ತು ಇತರ ಬಳಕೆದಾರರು ಕೂಡ ನಮ್ಮನ್ನು ಫಾಲೋ ಮಾಡಬಹುದು. ನಾವು ಫಾಲೋ ಮಾಡುವ ಬಳಕೆದಾರರು ‘ಟೂಟ್ಸ್’ ಪೋಸ್ಟ್ ಮಾಡಿದಾಗ, ಅವುಗಳು ನಮ್ಮ ಟೈಮ್ಲೈನ್ನಲ್ಲಿ ಗೋಚರಿಸುತ್ತವೆ. ಟೂಟ್ನಲ್ಲಿ ನಾವು ಪ್ರಸ್ತಾಪಿಸಲ್ಪಟ್ಟರೆ ನಮಗೆ ನೋಟಿಫಿಕೇಶನ್ ಬರುತ್ತದೆ. ನಮಗೆ ನೋಟಿಫಿಕೇಶನ್ಗಳನ್ನು ಕಳುಹಿಸುವ ಈವೆಂಟ್ಗಳನ್ನು ಸಹ ನಾವು ನಿಯಂತ್ರಿಸಬಹುದು” ಎಂದು ಪ್ಲೇ ಸ್ಟೋರ್ನಲ್ಲಿನ ಅಪ್ಲಿಕೇಶನ್ನ ವಿವರಣೆ ಹೇಳುತ್ತದೆ.
ಟ್ವಿಟರ್ನಂತೆ, ಟೂಟರ್ ಬಳಕೆದಾರರಿಗೆ ಕೂ ವೆರಿಫೈಡ್ ಖಾತೆಗಳ ಅವಕಾಶವಿದೆ. ಆದರೆ ಅದಕ್ಕಾಗಿ ನಮಗೆ ಟೂಟರ್ ಪ್ರೊ ಖಾತೆ ಬೇಕು. ಪಿಎಂ ಮೋದಿಯವರಲ್ಲದೆ, ಟೂಟರ್ಗೆ ಸೇರ್ಪಡೆಯಾದ ಇತರ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಮಿತ್ ಶಾ, ಅಕ್ಷಯ್ ಕುಮಾರ್, ಕರಣ್ ಜೋಹರ್, ಅಮಿತಾಭ್ ಬಚ್ಚನ್, ರಾಹುಲ್ ಗಾಂಧಿ, ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ವಿರಾಟ್ ಕೊಹ್ಲಿ ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.