ಬೆಂಗಳೂರು: ಏರ್ ಇಂಡಿಯಾ ಸಂಸ್ಥೆ ಬೆಂಗಳೂರು ಮತ್ತು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಡುವೆ ತಡೆ ರಹಿತ ನೇರ ವಿಮಾನ ಸೇವೆಯನ್ನು ಒದಗಿಸಲು ಮುಂದಾಗಿದೆ.
ಜನವರಿ 11, 2021 ರಿಂದ ಈ ಸೇವೆಯನ್ನು ಆರಂಭ ಮಾಡಲು ಏರ್ ಇಂಡಿಯಾ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬುಕ್ಕಿಂಗ್ ವ್ಯವಸ್ಥೆಗೂ ಅವಕಾಶವನ್ನು ಕಲ್ಪಿಸಿದೆ. ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ವಾರದಲ್ಲಿ ಎರಡು ಬಾರಿ ಈ ನೇರ ವಿಮಾನ ಯಾನ ನಡೆಸಲು ನಿರ್ಧರಿಸಲಾಗಿದೆ.
ಈ ಸೇವೆಗೆ ಏರ್ ಇಂಡಿಯಾ ತನ್ನ ಬೋಯಿಂಗ್ 777-200 ಎಲ್ ಆರ್ ವಿಮಾನವನ್ನು ಬಳಸಿಕೊಳ್ಳಲಿದೆ. ಇದು 228 ಆಸನಗಳುಳ್ಳ ವಿಮಾನವಾಗಿದೆ. ಈ ಪ್ರಯಾಣದ ಅವಧಿ 16 ಗಂಟೆಗಳಿಗೂ ಅಧಿಕವಾಗಿರಲಿದೆ. ಹಾಗೆಯೇ ಈ ಸೇವೆ ಏರ್ ಇಂಡಿಯಾದ ಅತಿ ದೀರ್ಘ ಮತ್ತು ದೂರದ ಸೇವೆ ಎಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.