ಬೆಂಗಳೂರು: ನಗರದ ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗೆ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮದ ಉಪ ಮುಖ್ಯ ಎಂಜಿನಿಯರ್ ಎನ್ ಸದಾಶಿವ ಅವರು ಮಾಹಿತಿ ನೀಡಿದ್ದಾರೆ.
ಈ ಮಾರ್ಗವನ್ನು ಜಯದೇವ ಇಂಟರ್ ಚೇಂಜ್ ಮೆಟ್ರೋ ಸ್ಟೇಷನ್ ನಾಗವಾರದಿಂದ ಗೊಟ್ಟಿಗೆರೆ ಮೆಟ್ರೋ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವುದಾಗಿಯೂ ಅವರು ತಿಳಿಸಿದ್ದಾರೆ. 31 ಮೀ. ಎತ್ತರವನ್ನು ಹೊಂದಿರುವ ಈ ಸ್ಟೇಷನ್ ಐದು ಲೇಯರ್ಗಳನ್ನು ಹೊಂದಿದೆ. ಜೊತೆಗೆ ದಕ್ಷಿಣ ಭಾರತದ ಅತೀ ಎತ್ತರದ ರಸ್ತೆ ಮತ್ತು ರೈಲ್ವೆ ಮೇಲ್ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಈ ಕೆಲಸಗಳಿಗಾಗಿ ಈಗಾಗಲೇ 4 ರಿಗ್ ಮಷಿನ್ಗಳನ್ನು ಸಹ ಆಮದು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಯ ಮಟ್ಟ, ಕಾನ್ಕೋರ್ಸ್ ಪ್ರದೇಶ, ಆರ್-5 ಮಟ್ಟ, ರೀಚ್-6 ಮಟ್ಟ, ಛಾವಣಿ ರಚನೆ ಈ ನಿರ್ಮಾಣವನ್ನು ಮತ್ತಷ್ಟು ವಿಭಿನ್ನವಾಗಿಸಲಿದೆ. ಈ ಮಾರ್ಗದಲ್ಲಿ 65% ಗಳಷ್ಟು ಕಾಮಗಾರಿ ಈಗಾಗಲೇ ಸಂಪೂರ್ಣವಾಗಿದೆ. ಈ ಮಾರ್ಗದುದ್ದಕ್ಕೂ ಆರ್ ವಿ ರಸ್ತೆ, ರಾಗಿ ಗುಡ್ಡ, ಜಯದೇವ, ಬಿಟಿಎಂ ಲೇ ಔಟ್, ಸಿಲ್ಕ್ ಬೋರ್ಡ್ ಸ್ಟೇಷನ್ಗಳಿಗೆ ಪೈಲ್ಸ್ ಹಾಕುವ ಪ್ರಕ್ರಿಯೆಯೂ ಸಂಪೂರ್ಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.