ನವದೆಹಲಿ: ಮೂರು ಸೇನಾಪಡೆಗಳ ನಡುವೆ ತೀರಾ ಅಗತ್ಯವಾದ ಏಕೀಕರಣವನ್ನು ಉತ್ತೇಜಿಲು ಮತ್ತು ಏಕೀಕೃತ ಥಿಯೇಟರ್ ಕಮಾಂಡ್ಗಳನ್ನು ರಚಿಸುವ ನಿಟ್ಟಿನಲ್ಲಿ, 15 ಲಕ್ಷ ಪ್ರಬಲ ಸಶಸ್ತ್ರ ಪಡೆಗಳಲ್ಲಿ ಸರಕುಗಳನ್ನು ನಿರ್ವಹಿಸಲು ಜಂಟಿ ರಚನೆಗಳ ಮೊದಲ ಗುಂಪನ್ನು ಸರ್ಕಾರ ಔಪಚಾರಿಕವಾಗಿ ಅನುಮೋದಿಸಿದೆ.
ಎಲ್ಲಾ ಮೂರು ಸೇನಾಪಡೆಗಳ ಮುಂಬೈ, ಗುವಾಹಟಿ ಮತ್ತು ಪೋರ್ಟ್ ಬ್ಲೇರ್ನಲ್ಲಿನ ಮೊದಲ ಮೂರು ಜಾಯಿಂಟ್ ಲಾಜಿಸ್ಟಿಕ್ಸ್ ನೋಡ್ಗಳು (ಜೆಎಲ್ಎನ್ಗಳು) ಸಣ್ಣ ಶಸ್ತ್ರಾಸ್ತ್ರ ಮದ್ದುಗುಂಡುಗಳು, ಪಡಿತರ, ಎಫ್ಒಎಲ್ (ಇಂಧನಗಳು, ತೈಲಗಳು ಮತ್ತು ಲೂಬ್ರಿಕಂಟ್ಗಳು), ಸಾಮಾನ್ಯ ಸ್ಟೋರ್ಸ್, ವಾಯುಯಾನ ಉಡುಪು, ಬಿಡಿಭಾಗಗಳು ಮತ್ತು ಎಂಜಿನಿಯರಿಂಗ್ ಸರಕುಗಳನ್ನು ನಿರ್ವಹಿಸಲಿವೆ.
ಪ್ರತಿಯೊಂದು ಜಾಯಿಂಟ್ ಲಾಜಿಸ್ಟಿಕ್ಸ್ ನೋಡ್ಗಳು ತಮ್ಮದೇ ಆದ ಪ್ರಮುಖ ಸೇವೆಯನ್ನು ಹೊಂದಿದ್ದು, ಅದು ಎಲ್ಲಾ ಸರಬರಾಜು ಮತ್ತು ಸಂಗ್ರಹಣೆಯನ್ನು ನೋಡಿಕೊಳ್ಳುತ್ತದೆ. ಮುಂಬೈನ ಜಂಟಿ ಲಾಜಿಸ್ಟಿಕ್ಸ್ ನೋಡ್ನ ನೇತೃತ್ವವನ್ನು ಭಾರತೀಯ ನೌಕಾಪಡೆ ವಹಿಸಲಿದ್ದರೆ, ಭಾರತೀಯ ಭೂ ಸೇನೆಯು ಗುವಾಹಟಿಯಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ಎಎನ್ಸಿ)ನಲ್ಲಿನ ಜಾಯಿಂಟ್ ಲಾಜಿಸ್ಟಿಕ್ಸ್ ನೋಡ್ ಅನ್ನು ಮುನ್ನಡೆಸಲಿದೆ.
ಈ ಮೂರು ಜಾಯಿಂಟ್ ಲಾಜಿಸ್ಟಿಕ್ಸ್ ನೋಡ್ಗಳ ಜೊತೆಗೆ, ಮುಂದಿನ ವರ್ಷಗಳಲ್ಲಿ ಕ್ರಿಯಾತ್ಮಕ ಥಿಯೇಟರ್ ಕಮಾಂಡ್ ಆಕಾರವನ್ನು ಪಡೆದುಕೊಂಡತೆ ದೇಶದ ಇತರ ಭಾಗಗಳಲ್ಲಿಯೂ ಮತ್ತಷ್ಟು ಜಾಯಿಂಟ್ ಲಾಜಿಸ್ಟಿಕ್ಸ್ ನೋಡ್ಗಳು ಕಾರ್ಯರೂಪಕ್ಕೆ ಬರಲಿವೆ. ಇವು ಕಾರ್ಯಾಚರಣೆಗಳಲ್ಲಿ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.