ಇಂಧೋರ್: ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದಲ್ಲಿ ಭಾರೀ ರೈಲು ಅಪಘಾತ ಸಂಭವಿಸಿದ್ದು, ಬರೋಬ್ಬರಿ ೩೦ ಮಂದಿ ಮೃತರಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.
ಮುಂಬಯಿಯಿಂದ ವಾರಾಣಾಸಿಗೆ ಆಗಮಿಸುತ್ತಿದ್ದ ಕಾಮಯಾನಿ ಎಕ್ಸ್ಪ್ರೆಸ್ ಮಧ್ಯಪ್ರದೇಶದ ಹರ್ದಾ ಸಮೀಪದ ಮಚಕ್ ನದಿಯ ಸೇತುವೆಯನ್ನು ದಾಟುವಾಗ ಹಳಿ ತಪ್ಪಿದೆ. ಈ ಘಟನೆ ಸಂಭವಿಸಿದ ಕೆಲವೇ ಕ್ಷಣದಲ್ಲಿ ಮುಂಬಯಿಯಿಂದ ಜಾಬಲ್ಪುರಕ್ಕೆ ಹೋಗುತ್ತಿದ್ದ ಮತ್ತೊಂದು ಪ್ರಯಾಣಿಕ ರೈಲು ಜನತಾ ಎಕ್ಸ್ಪ್ರೆಸ್ನ ಹಳಿಯೂ ತಪ್ಪಿದೆ.
ಭಾರೀ ಮಳೆಗೆ ಹಳಿಯಲ್ಲಿ ನೀರುತುಂಬಿ ಮಣ್ಣುಗಳು ಕೊಚ್ಚಿ ಹೋದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಭೇಟಿ ಕೊಡಲಿದ್ದಾರೆ.
ರೈಲ್ವೇ ಸಚಿವ ಸುರೇಶ್ ಪ್ರಭು ಮತ್ತು ಪ್ರಧಾನಿ ನರೇಂದ್ರ ಮೋದಿ ಘಟನೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೂ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.