ಕೊಲ್ಲಂ: ಸಮುದ್ರ ಜೀವಿಗಳಂತೆ ಈಜುವುದನ್ನು ಕಲಿತಿರುವ ರತೀಶ್ ಅವರನ್ನು ʼಡಾಲ್ಫಿನ್ʼ ಎಂದು ಕರೆಯಲಾಗುತ್ತದೆ. ಇವರು ತಮ್ಮ ಕೈ ಮತ್ತು ಕಾಲುಗಳನ್ನು ಕಟ್ಟಿ ಕೂಡ ನೀರಿನಲ್ಲಿ ಸುಲಲಿತವಾಗಿ ಈಜಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.
ಕೇರಳದ ಅಲಪ್ಪಾಡ್ನಲ್ಲಿರುವ ಮೀನುಗಾರರ ಕುಟುಂಬವೊಂದರ ಇವರಿಗೆ ಸಾಹಸ ಕ್ರೀಡೆಗಳ ಪ್ರಪಂಚವನ್ನು ಪ್ರವೇಶಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. 38 ವರ್ಷದ ಇವರು ಸುಮಾರು ಎರಡು ದಶಕಗಳ ಕಾಲ ಮಾಡಿದ ಪ್ರಯತ್ನಗಳ ಫಲವಾಗಿ ಬುಧವಾರ ತಿರುವನಂತಪುರಂ-ಶೋರನೂರ್ ಕಾಲುವೆಯಾದ್ಯಂತ 10 ಕಿ.ಮೀ ದೂರದವರೆಗೆ ಕೈ ಮತ್ತು ಕಾಲುಗಳನ್ನು ಕಟ್ಟಿ ಈಜಿದ್ದಾರೆ. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಈ ಸಂಪೂರ್ಣ ಸವಾಲನ್ನು ಪೂರ್ಣಗೊಳಿಸಲು ಅವರಿಗೆ ಐದು ಗಂಟೆ 10 ನಿಮಿಷಗಳು ಬೇಕಾಯಿತು.
ಪ್ರಸ್ತುತ ಕೊಲ್ಲಂ ಬೀಚ್ನಲ್ಲಿ ಲೈಫ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ರತೀಶ್ 2002 ರಿಂದ ಅರೇಬಿಯನ್ ಸಮುದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು 2002 ರಲ್ಲಿ ತಮ್ಮ ಮೊದಲ ಸಾಹಸ ಕಾರ್ಯಕ್ರಮವನ್ನು ಆಯೋಜಿಸಿದರು, ಕೈ ಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ 50 ಅಡಿ ಎತ್ತರದ ನೀಂದಕರ ಸೇತುವೆಯಿಂದ ನದಿ ಮುಖಕ್ಕೆ ಹಾರಿ 500 ಮೀಟರ್ ಈಜಿದ್ದರು.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಅರೇಬಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದಂತೆ ಹಲವು ದಾಖಲೆಗಳನ್ನು ಹೊಂದಿರುವ ರತೀಶ್, ಸಾಹಸ ಈಜುಗಾರರಿಂದ ಕಠಿಣ ಕಾರ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಇಂಗ್ಲಿಷ್ ಚಾನೆಲ್ ಅನ್ನು ದಾಟುವುದು ತನ್ನ ಮುಂದಿನ ಗುರಿಯಾಗಿದೆ ಎಂದು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.