ಬೆಂಗಳೂರು: ಭಾರತೀಯ ವಾಯುಸೇನೆಯ ಹಳೆಯದಾದ ಕಿರಣ್ ಏರ್ಕ್ರಾಫ್ಟ್ ಫ್ಲೀಟ್ ಅನ್ನು ರಿಪ್ಲೇಸ್ ಮಾಡುವ ಸಲುವಾಗಿ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸಿರುವ ಸ್ವದೇಶೀ ಇಂಟರ್ಮೀಡಿಯೇಟ್ ಜೆಟ್ ಟ್ರೈನರ್ನ ಸ್ಪಿನ್ ಫ್ಲೈಟ್ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
HAL ನ ಪರೀಕ್ಷಾ ಪೈಲಟ್ಗಳಾದ ನಿವೃತ್ತ ಕ್ಯಾ. ಎಚ್ ವಿ ಠಾಕೂರ್ ಮತ್ತು ನಿವೃತ್ತ ಪಿ ಅವಸ್ತಿ ಅವರು ವಿಮಾನಗಳ ಪರೀಕ್ಷಾ ಹಾರಾಟವನ್ನು ನಡೆಸಿದ್ದಾರೆ ಎಂದು ಬೆಂಗಳೂರಿನ ಪ್ರಧಾನ ಕಛೇರಿ ಮಾಹಿತಿ ನೀಡಿದೆ. ಈ ಪರೀಕ್ಷೆಯು ಅತ್ಯಂತ ಮಹತ್ವದ್ದಾಗಿದ್ದು, ವಿಮಾನದ ಕಾರ್ಯವೈಖರಿಯನ್ನು ಪರೀಕ್ಷೆ ಮಾಡುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ. ವೇಗ, ಎತ್ತರ ಮತ್ತು ಸಾಮರ್ಥ್ಯಗಳನ್ನು ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಈ ಪರೀಕ್ಷೆ ನಡೆಸಲಾಗಿದೆ. ಡ್ರಾಪ್ ಟ್ಯಾಂಕ್ಗಳು ಮತ್ತು ಬಾಂಬ್ಗಳೊಂದಿಗೆ ಈ ಹಾರಾಟ ಪರೀಕ್ಷೆಯನ್ನು ಸಂಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿ ಹಂತದಲ್ಲೂ ಪ್ರಮಾಣೀಕೃತ ಏಜೆನ್ಸಿಗಳ ಒಳಗೊಳ್ಳುವಿಕೆ ಮತ್ತು ಅನುಮತಿಯ ಜೊತೆಗೆ ಎರಡು ವಿಮಾನಗಳಲ್ಲಿ ಬದಲಾವಣೆಗಳನ್ನು ಅಳವಡಿಸಲಾಗಿದೆ. ಎರಡು ವಿಮಾನಗಳು ಸ್ಪಿನ್ ಮತ್ತು ರಾಡ್ಡಾರ್ ಸರ್ಫೇಸ್ನ ಹೊಸ ಸಂರಚನೆಯ ಜೊತೆಗೆ ಸಾಮಾನ್ಯ ನಿರ್ವಹಣೆಯನ್ನು ನಿರ್ವಹಿಸಲು ಈ ಹಾರಾಟವನ್ನು ನಡೆಸಿ ಪರೀಕ್ಷೆ ನಡೆಸಲಾಗಿದೆ. ಇವುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಆ್ಯಂಟಿ ಸ್ಪಿನ್ ಪ್ಯಾರಾಚೂಟ್ ಸಿಸ್ಟಂ ಅನ್ನು ಸಹ ಇದರಲ್ಲಿ ಸಂಯೋಜಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.