ನವದೆಹಲಿ: ಯುವ ಜನರಿಗೆ ಸ್ಫೂರ್ತಿಯಾಗುವ ಮತ್ತು ಅವರಲ್ಲಿರುವ ಕೌಶಲಕ್ಕೆ ಪೂರಕ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸದಾ ಒಂದಿಲ್ಲೊಂದು ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ.
ಇದಕ್ಕೆ ಪೂರಕ ಎಂಬಂತೆ ಇದೀಗ ಪಿಎಂ ಫಾರ್ಮಲೈಸೇಷನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (ಪಿಎಂ ಎಫ್ಎಂಇ ಸ್ಕೀಮ್) ಗೆ ಆಕರ್ಷಕ ಟ್ಯಾಗ್ಲೈನ್ ಸಿದ್ಧಪಡಿಸುವ ಸ್ಪರ್ಧೆಯೊಂದನ್ನು ಯುವ ಜನರ ಮುಂದಿಟ್ಟಿದೆ. ಇದಕ್ಕಾಗಿ ಸೃಜನಶೀಲ ಕಲ್ಪನೆ, ಮನಸ್ಸುಳ್ಳ ಜನರಿಂದ ಸೃಜನಶೀಲ ಟ್ಯಾಗ್ಲೈನ್ಗಳನ್ನು ಎದುರು ನೋಡುತ್ತಿರುವುದಾಗಿಯೂ ಕೇಂದ್ರ ಸರ್ಕಾರ ತಿಳಿಸಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಂದರೆ ಆಯ್ಕೆಯಾದ ಟ್ಯಾಗ್ಲೈನ್ಗಳಿಗೆ 50 ಸಾವಿರ ರೂ. ಗಳ ನಗದು ಬಹುಮಾನವನ್ನು ನೀಡಲಾಗುವುದಾಗಿಯೂ ಸರ್ಕಾರ ಪ್ರಕಟಿಸಿದೆ. ಆಸಕ್ತರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
Calling all creative minds to suggest innovative taglines for PM Formalisation of Micro food processing Enterprises (PM FME Scheme). The best entry will get a chance to win a cash prize of Rs.50,000. https://t.co/QW3Ewu5j5L @PMFMEScheme @MOFPI_GOI pic.twitter.com/TCXgGGeayZ
— MyGovIndia (@mygovindia) November 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.