ಹೈದರಾಬಾದ್: ಇತ್ತೀಚೆಗೆ ಉಸ್ಮಾನಿಯಾ ವಿಶ್ವವಿದ್ಯಾಲಯದ ಪದವಿ ಫಲಿತಾಂಶಗಳು ಘೋಷಣೆಯಾಗಿದ್ದು, ಹೈದರಾಬಾದ್ನ ಅಗಸ್ತ್ಯ ಜೈಸ್ವಾಲ್ ಕೇವಲ 14 ವರ್ಷ ವಯಸ್ಸಿನಲ್ಲಿಯೇ ಬಿಎ ಮಾಸ್ ಕಮ್ಯುನಿಕೇಷನ್ ಮತ್ತು ಜರ್ನಲಿಸಂ ಪದವಿ ಪೂರ್ಣಗೊಳಿಸಿದ ಭಾರತದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಈ ಹಿಂದೆ, ಅಗಸ್ತ್ಯ ಜೈಸ್ವಾಲ್ ತೆಲಂಗಾಣದಲ್ಲಿ 9 ನೇ ವಯಸ್ಸಿನಲ್ಲಿ 7.5 ಜಿಪಿಎಯೊಂದಿಗೆ 10ನೇ ತರಗತಿ ಪಾಸು ಪಡೆದ ಮೊದಲ ಬಾಲಕನಾಗಿ ಹೊರಹೊಮ್ಮಿದ್ದ. 11 ವರ್ಷ ವಯಸ್ಸಿನ ಅಗಸ್ತ್ಯ ಜೈಸ್ವಾಲ್ ತೆಲಂಗಾಣದಲ್ಲಿ ಮಧ್ಯಂತರ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 63% ಅಂಕದೊಂದಿಗೆ ಉತ್ತೀರ್ಣನಾದ ಮೊದಲ ಹುಡುಗ ಎನಿಸಿಕೊಂಡಿದ್ದ. ಈತ ಹೈದರಾಬಾದ್ನ ಸೇಂಟ್ ಮೇರಿಸ್ ಕಾಲೇಜಿನ ಯೂಸುಫ್ಗುಡಾ ವಿದ್ಯಾರ್ಥಿಯಾಗಿದ್ದಾನೆ.
ಕ್ರೀಡೆಗಳಲ್ಲಿ ಮುಂದಿರುವ, ಅಗಸ್ತ್ಯ ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಆಟಗಾರ. ಈತ ಕೇವಲ 1.72 ಸೆಕೆಂಡುಗಳಲ್ಲಿ A- Z ಅನ್ನು ಟೈಪ್ ಮಾಡಬಲ್ಲ. ಅಗಸ್ತ್ಯ ತನ್ನ ಎರಡೂ ಕೈಗಳಿಂದ ಬರೆಯಬಲ್ಲ ಸಾಮರ್ಥ್ಯ ಹೊಂದಿದ್ದಾನೆ.
ಅಗಸ್ತ್ಯ ಗಾಯಕ ಮತ್ತು ಪಿಯಾನೋ ವಾದಕ ಕೂಡ. ಆತ ಅಂತರರಾಷ್ಟ್ರೀಯ ಭಾಷಣಕಾರನೂ ಹೌದು. ಅಗಸ್ತ್ಯ ಜೈಸ್ವಾಲ್ ಬಹು-ಪ್ರತಿಭಾನ್ವಿತ ಮಗು ಎಂಬುದರಲ್ಲಿ ಅನುಮಾನವಿಲ್ಲ. ಆತನ ಪೋಷಕರು ಹೇಳುವಂತೆ, “ಪ್ರತಿ ಮಗುವಿಗೆ ವಿಶೇಷ ಗುಣವಿದೆ, ಆದ್ದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ವೈಯಕ್ತಿಕ ಗಮನ ಹರಿಸಿದರೆ ಪ್ರತಿ ಮಗುವೂ ತಮ್ಮದೇ ಆದ ಕ್ಷೇತ್ರದಲ್ಲಿ ಇತಿಹಾಸವನ್ನು ರಚಿಸಬಹುದು”.
ಈತ ತನ್ನ ಎರಡನೇ ವಯಸ್ಸಿನಲ್ಲಿ 300 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಎಂಬುದಾಗಿ ಪೋಷಕರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.