ಮುಂಬಯಿ: ಹಿಂದೂ ಭಯೋತ್ಪಾದನೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಭಾರತ ಶೇ.100ರಷ್ಟು ಹಿಂದೂ ರಾಷ್ಟ್ರ, ತಮ್ಮದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಹಿಂದೂಗಳಿಗೆ ಯಾವ ಕಾರಣವೂ ಇಲ್ಲ’ ಎಂದಿದೆ.
ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಸೃಷ್ಟಿಸಿ ಉಗ್ರರ ವಿರುದ್ಧದ ಭಾರತ ಹೋರಾಟವನ್ನು ಕಾಂಗ್ರೆಸ್ ದುರ್ಬಲಗೊಳಿಸಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಭಯೋತ್ಪಾದನೆಗೆ ಕೇಸರಿ ಬಣ್ಣ ನೀಡಿ, ಆ ಮೂಲಕ ರಾಜಕೀಯ ಮಾಡುವುದು ಕುತಂತ್ರ ಮತ್ತು ಸ್ವಾರ್ಥದ ಕ್ರಮ. ಹಿಂದೂಗಳನ್ನು ಉಗ್ರರು ಎಂದು ಕರೆಯುವುದು, ಆ ಮೂಲಕ ಪಾಕಿಸ್ಥಾನ ಪ್ರಾಯೋಜಿಸುತ್ತಿರುವ ಹಸಿರು ಭಯೋತ್ಪಾದನೆಯನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ನಿಮ್ಮ ಸಮುದಾಯಕ್ಕೆ ನೀವು ತೋರಿಸುತ್ತಿರುವ ಅಪ್ರಾಮಾಣಿಕತೆಯಾಗಿದೆ’ ಎಂದಿದೆ.
ಹಿಂದೂಗಳನ್ನು ಉಗ್ರರು ಎಂದು ಕರೆದಿದ್ದೇ ಕಾಂಗ್ರೆಸ್ಗೆ ಲೋಕಸಭಾ ಚುನಾವಣೆಯಲ್ಲಿ ಮುಳುವಾಯಿತು ಎಂದು ಅದು ಹರಿಹಾಯ್ದಿದೆ. ಅಲ್ಲದೇ ಕಸಬ್ ಮತ್ತು ಅಜ್ಮಲ್ ಕೂಡ ಹಿಂದೂ ಭಯೋತ್ಪಾದಕರಾಗಿದ್ದರೇ? ಪಾಕಿಸ್ಥಾನಿಗಳು ಕಾಶಿನಾಥನನ್ನು ಕಸಬ್ ಮಾಡಿ ಭಾರತಕ್ಕೆ ಕಳುಹಿಸಿದ್ದರೇ? ಎಂದು ಅದು ಕಾಂಗ್ರೆಸನ್ನು ಪ್ರಶ್ನಿಸಿದೆ.
ಕಾಂಗ್ರೆಸ್ ಹಬ್ಬಿಸಿದ ಈ ವದಂತಿ ಪಾಕಿಸ್ಥಾನದ ಕುತಂತ್ರಕ್ಕೆ ಹೆಚ್ಚಿನ ಬಲ ನೀಡಿದೆ, ಐಎಸ್ಐ ಮತ್ತು ಲಷ್ಕರ್ ಉಗ್ರರು ಹೆಮ್ಮೆಯಿಂದ ಎದೆತಟ್ಟುವಂತೆ ಮಾಡಿದೆ ಎಂದು ಶಿವಸೇನೆ ಕಿಡಿಕಾರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.