ನವದೆಹಲಿ: ದೆಹಲಿಯ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ ಒಬ್ಬರು ಮಹತ್ವದ ಸಾಧನೆಯನ್ನು ಮಾಡಿ ವಿಶೇಷ ಭಡ್ತಿಯನ್ನು ಪಡೆದುಕೊಂಡಿದ್ದಾರೆ. ದಾಖಲೆಯ 60 ದಿನಗಳಲ್ಲಿ ನಾಪತ್ತೆಯಾಗಿದ್ದ 76 ಮಕ್ಕಳನ್ನು ಅವರ ಕುಟುಂಬದೊಂದಿಗೆ ಸೇರಿಸಿದ ಮಹತ್ವದ ಕಾರ್ಯವನ್ನು ಇವರು ಮಾಡಿದ್ದಾರೆ. ಇದಕ್ಕಾಗಿ ಇವರಿಗೆ ಅವಧಿಗೂ ಮುನ್ನವೇ ವಿಶೇಷ ಭಡ್ತಿ ಪ್ರಾಪ್ತಿಯಾಗಿದೆ.
ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಭಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಸೀಮಾ ಧಾಕ ಪಾತ್ರರಾಗಿದ್ದಾರೆ.
ಸಮಯ್ ಪುರ ಬಾಡ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸೀಮಾ ಧಾಕಾ ಎರಡೂವರೆ ತಿಂಗಳಲ್ಲಿ ನಾಪತ್ತೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಭಡ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಮಾತ್ರವಲ್ಲದೇ ಪಂಜಾಬ್, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲೂ ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚುವ ಮೂಲಕ ಇವರು ಸಾಧನೆ ಮಾಡಿದ್ದಾರೆ.
ಕಾನ್ಸ್ ಟೇಬಲ್ ಅಥವಾ ಹೆಡ್ ಕಾನ್ಸ್ ಟೇಬಲ್ 12 ತಿಂಗಳೊಳಗೆ 14 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 50 ಕ್ಕೂ ಹೆಚ್ಚು ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಿದರೆ ಅವರಿಗೆ ಈ ವಿಶೇಷ ಭಡ್ತಿಯನ್ನು ನೀಡುವ ಅವಕಾಶವಿದೆ. 12 ತಿಂಗಳಲ್ಲಿ 15ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹಚ್ಚಿದರೆ ಅಸಾಧಾರಾಣ ಕಾರ್ಯ ಪುರಸ್ಕಾರ ನೀಡಲಾಗುತ್ತದೆ.
“ಇದು ನನ್ನ ಕೆಲಸಕ್ಕಾಗಿ ನನಗೆ ದೊರೆತ ಪ್ರತಿಫಲ ಮತ್ತು ಈ ಗೌರವದಿಂದ ನಾನು ಸಂತಸಗೊಂಡಿದ್ದೇನೆ. ಇಂತಹ ಗೌರವ ಹೆಚ್ಚಿನ ಪ್ರಯತ್ನವನ್ನು ಮಾಡಲು ನಮ್ಮನ್ನು ಪ್ರೋತ್ಸಾಹಿಸುತ್ತವೆ” ಎಂದು ಸೀಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.