ಸಾಗರ: ತಾಲೂಕಿನ ಬರೂರು ಗ್ರಾಮದ ಲ್ಯಾವಿಗೆರೆಯ ಅವಳಿ ಸಹೋದರಿಯರಾದ ಮಧು ಮತ್ತು ಮಮತಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದು, ಅವರ ಸಾಧನೆ ಈಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಈ ಇಬ್ಬರೂ ಸಹೋದರಿಯರು ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಏಳಕ್ಕೂ ಹೆಚ್ಚು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದವರು. ಅದರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಆಯ್ಕೆ ಮಾಡಿಕೊಂಡಿರುವ ಈ ಮಾದರಿ ಸಹೋದರಿಯರು, ಮುಂದೆ ಸಮಾಜಕ್ಕೆ ತಾವೇನಾದರೂ ಮಾಡಬೇಕು ಎಂಬ ಮನದಿಂಗಿತವನ್ನು ಹೊಂದಿರುವುದಾಗಿಯೂ ತಿಳಿಸಿದ್ದಾರೆ.
ಸದ್ಯ ಮಧು ಅವರು ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು, ಮಮತಾ ಸಹ ಕೆಲವೇ ದಿನಗಳಲ್ಲಿ ತರಬೇತಿ ಶಾಲೆಗೆ ತೆರಳಲು ಅಗತ್ಯವೆನಿಸುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ಹೆತ್ತವರಿಗೆ ಮತ್ತು ತಮ್ಮ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಹದಿನೈದು ವರ್ಷಗಳ ಹಿಂದೆ ಇವರ ತಂದೆ ಲಿಂಗಪ್ಪ ಅವರು ನಿಧನರಾಗಿದ್ದು, ತಾಯಿ ಭಾಗ್ಯಮ್ಮ ಅವರೇ ಇವರಿಬ್ಬರನ್ನು ಬೆಳೆಸಿದ್ದಾರೆ. ಓದಿನಲ್ಲಿಯೂ ಮುಂದಿದ್ದ ಈ ಅವಳಿ ಸಹೋದರಿಯರು ಸದ್ಯ ತಮ್ಮ ಸಾಧನೆಯ ಮೂಲಕವೇ ಇತರರಿಗೆ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.