ನವದೆಹಲಿ: ಅಪಾಯಕಾರಿ ಬೆಳವಣಿಗೆಯೊಂದರಲ್ಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಟರ್ಕಿಶ್ ಜಿಹಾದಿ ಸಂಘಟನೆ ಐಎಚ್ಎಚ್ 2018 ರಲ್ಲಿ ಸಭೆ ನಡೆಸಿತ್ತು ಎಂಬುದಾಗಿ ಯುರೋಪಿಯನ್ ಸಂಶೋಧನಾ ಗುಂಪು ವರದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಟರ್ಕಿಯ ರಾಜಧಾನಿ ಇಸ್ತಾಂಬುಲ್ನಲ್ಲಿರುವ ಐಎಚ್ಎಚ್ನ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆದಿದೆ. ಸಭೆಯಲ್ಲಿ, ಪಿಎಫ್ಐ ಸದಸ್ಯರಾದ ಪ್ರೊಫೆಸರ್ ಪಿ ಕೋಯಾ ಮತ್ತು ಇಎಂ ಅಬ್ದುಲ್ ರಹೀಮಾನ್ ಅವರುಗಳು ಐಎಚ್ಎಚ್ನ ಪ್ರಧಾನ ಕಾರ್ಯದರ್ಶಿ ಡರ್ಮುಕ್ ಐಡಾನ್ ಮತ್ತು ಉಪಾಧ್ಯಕ್ಷ ಹುಸೈನ್ ಒರುಕ್ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
ಐಎಚ್ಎಚ್ ಟರ್ಕಿಯ ಗುಪ್ತಚರದ ಜೊತೆಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತಿರುವುದರಿಂದ ಈ ಬೆಳವಣಿಗೆ ಮಹತ್ವವನ್ನು ಪಡೆಯುತ್ತದೆ. 2014 ರಲ್ಲಿ ಸಿರಿಯಾದಲ್ಲಿ ಅಲ್ ಖೈದಾದ ಭಯೋತ್ಪಾದಕ ಸಂಘಟನೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಿದ ಆರೋಪವೂ ಐಎಚ್ಎಚ್ಗೆ ಇದೆ. ಪಿಎಫ್ಐ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಗಲಭೆಗಳು ಮತ್ತು ನಾಗರಿಕ ಅಶಾಂತಿಯನ್ನು ಪ್ರಚೋದಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ಸುದ್ದಿಯಲ್ಲಿದೆ.
ಪಿಎಫ್ಐ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆಯಲ್ಲಿ ಹಲವಾರು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದ ಖಾತೆಗಳಿಂದ ಕೋಟ್ಯಾಂತರ ಮೊತ್ತ ವಿದ್ಡ್ರಾ ಆದ ಬಗ್ಗೆ ತಿಳಿದು ಬಂದಿದೆ.
ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು 2019 ರ ಡಿಸೆಂಬರ್ನಲ್ಲಿ ಪಿಎಫ್ಐ ಅನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಕರ್ನಾಟಕ ಮತ್ತು ಅಸ್ಸಾಂ ಕೂಡ ಪಿಎಫ್ಐ ನಿಷೇಧದ ಬಗ್ಗೆ ಯೋಚಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.