ಅಯೋಧ್ಯೆ: ಪವಿತ್ರ ನಗರ ಅಯೋಧ್ಯೆ ಶುಕ್ರವಾರ ‘ದೀಪೋತ್ಸವ’ ಆಚರಣೆಯ ಅಂಗವಾಗಿ 5.84 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ಮಾಡಿದೆ.
ಆಚರಣೆಯ ಸಂದರ್ಭದಲ್ಲಿ ಅಯೋಧ್ಯೆಯ ಸರಯು ನದಿಯ ದಡದಲ್ಲಿ ಬೆಳಗಿದ ‘ತೈಲ ದೀಪಗಳ ಅತಿದೊಡ್ಡ ಪ್ರದರ್ಶನ’ಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಗಳಲ್ಲಿ ಸ್ಥಾನ ಪಡೆದಿವೆ.
ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ನಂತರ ರಾಮಜನ್ಮಭೂಮಿ ಆವರಣದಲ್ಲಿ ಮೊದಲ ದೀಪೋತ್ಸವ ಆಚರಣೆ ನಡೆದಿದ್ದು, ಇದರ ಅಂಗವಾಗಿ 6,06,569 ದೀಪಗಳನ್ನು ಬೆಳಗಿಸಲಾಯಿತು.
ದೀಪೋತ್ಸವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ದಾಖಲೆಯನ್ನು ರಾಮ ಭಕ್ತರಿಗೆ ಅರ್ಪಿಸಿದರು.
2021 ರಲ್ಲಿ 7.51 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅವರು ನಿನ್ನೆ ರಾಮ ಜನ್ಮಭೂಮಿ ಸ್ಥಳದಲ್ಲಿ ಭಗವಾನ ರಾಮನಿಗೆ ಪ್ರಾರ್ಥನೆ ಸಲ್ಲಿಸಿದರು ಮತ್ತು ‘ಆರತಿ’ ಮಾಡಿದರು. ಬಳಿ ದೀಪೋತ್ಸವ ಸಮಾರಂಭದಲ್ಲಿ ಭಾಗಿಯಾದರು.
पतित-पावनी माँ सरयू के तट पर आज त्रेतायुग का प्रतिबिंब देख मन प्रफुल्लित है।
आज वैदिक मंत्रों के मध्य 6,06,569 दीपों के प्रज्ज्वलन का बना विश्व रिकॉर्ड, अपनी संस्कृति के प्रति सुदृढ़ होते जन विश्वास का प्रतीक है।
यह विश्व रिकॉर्ड आप सभी राम भक्तों को समर्पित है। pic.twitter.com/jo3ZUTP9t7
— Yogi Adityanath (@myogiadityanath) November 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.