ನವದೆಹಲಿ: ಸಿನಿಮಾ ಗೀತೆಗಳನ್ನು, ಜನಪದ ಹಾಡುಗಳನ್ನು, ಭಜನೆಗಳನ್ನು ಹೇಳುತ್ತಾ ರೈಲು, ಬಸ್ಸು ಎಲ್ಲೆಂದರಲ್ಲಿ ಭಿಕ್ಷಾಟನೆ ನಡೆಸುವವರನ್ನು ನಾವು ನಿತ್ಯ ಕಾಣುತ್ತಲೇ ಇರುತ್ತೇವೆ, ದೆಹಲಿ, ಮುಂಬಯಿಯಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ.
ಸಂಗೀತ ಎಂಬುದು ಜೀವನ ನಿರ್ವಹಣೆಗೆ ಇವರಿಗಿರುವ ಸಾಧನ, ಹಾಡುತ್ತಲೇ ಭಿಕ್ಷಾಟನೆ ನಡೆಸುವ ಇವರಿಗೆ ಸಂಗೀತದ ಕಲೆ ನೈಸರ್ಗಿಕವಾಗಿಯೇ ಒಲಿದಿರುತ್ತದೆ. ಇದೀಗ ಇವರ ಸಂಗೀತ ಪ್ರತಿಭೆಯನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಿನಿಮಾ ಗೀತೆಗಳ ಬದಲು ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ ಮುಂತಾದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಹಾಡುಗಳನ್ನು ಇವರಿಂದ ಹಾಡಿಸುವ ಮಹತ್ವದ ಯೋಜನೆಯನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ 3 ಸಾವಿರ ಭಿಕ್ಷುಕರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ.
ರೈಲುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಹಾಡುತ್ತಾ ಜನ ಸಾಮಾನ್ಯರಿಗೆ ಅವುಗಳ ಬಗ್ಗೆ ಮಾಹಿತಿ ತಲುಪಿಸುವ ಕಾಯಕವನ್ನು ಇವರಿಗೆ ನೀಡಲಾಗುತ್ತದೆ. ಅದಕ್ಕಾಗಿ ಅವರಿಗೆ ಹಣವನ್ನೂ ಸರ್ಕಾರ ನೀಡಲಿದೆ. ಇದರಿಂದ ಅವರು ಭಿಕ್ಷಾಟನೆ ನಡೆಸಬೇಕಾದ ಅಗತ್ಯವೂ ಇರುವುದಿಲ್ಲ. ಅವರ ಜೀವನಮಟ್ಟವೂ ಸುಧಾರಿಸುತ್ತದೆ.
ಭಿಕ್ಷುಕರನ್ನು ಉದ್ಧರಿಸುವ ಜೊತೆಗೆ ತನ್ನ ಯೋಜನೆಗಳನ್ನು ಪ್ರಚುರಪಡಿಸುವ ಸರ್ಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.