ಕಾಶ್ಮೀರ: ಗಡಿಯಲ್ಲಿ 1 ಭಾರತದ 12 ಪೋಸ್ಟ್ಗಳ ಮೇಲೆ ಪಾಕಿಸ್ಥಾನ ಸೈನಿಕರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಒರ್ವ ಭಾರತೀಯ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ.
ನಿನ್ನೆ ರಾತ್ರಿ ಮತ್ತು ಬೆಳಿಗ್ಗೆ ಅಂತಾರಾಷ್ಟ್ರೀಯ ಗಡಿ ಕನಚಕ್ನಲ್ಲಿ ಉಗ್ರರು ಕಾಣಿಸಿಕೊಂಡಿದ್ದಾರೆ. ದಪ್ಪನಾದ ಸಸ್ಯಗಳ ಪೊದೆಯ ಹಿಂದೆ ಇವರು ಅವಿತುಕೊಂಡಿದ್ದರು ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
ಬಳಿಕ ಇಂದು ಮುಂಜಾನೆ 5 ಗಂಟೆಗೆ ಪಾಕಿಸ್ಥಾನಿ ರೇಂಜರ್ಗಳು ಪರ್ಗಲ್ ಮತ್ತು ಕನಚಕ್ ಸೆಕ್ಟರ್ಗಳಲ್ಲಿನಪೋಸ್ಟ್ಗಳ ಮೇಲೆ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಇದು 48 ಗಂಟೆಗಳಲ್ಲಿ ಪಾಕಿಸ್ಥಾನ ನಡೆಸುತ್ತಿರುವ ಎರಡನೇ ದಾಳಿಯಾಗಿದೆ.
ಭಾರತೀಯ ಯೋಧರು ಕೂಡ ಪಾಕಿಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿವೆ.
ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ಪಾಕಿಸ್ಥಾನ 19 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದ್ದು, ಮೂವರು ಭಾರತೀಯ ಯೋಧರು, ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ೧೪ ಮಂದಿಗೆ ಗಾಯಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.