ಕೊಪ್ಪಳ: ರಾಜ್ಯದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ಕೊಪ್ಪಳ ಜಿಲ್ಲೆಯ 35 ಸಾವಿರ ಬಾಲಕಿಯರು ಬಾಲ್ಯ ವಿವಾಹ ಮಾಡಿಕೊಳ್ಳದಂತೆ ಪ್ರತಿಜ್ಞೆ ಮಾಡಲಿದ್ದಾರೆ. ಈ ಬಾಲಕಿಯರು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ಸ್ ಫಂಡ್(ಯುನಿಸೆಫ್)ಗೆ ಪತ್ರ ಬರೆಯಲಿದ್ದಾರೆ.
ಈ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಯಲು ಯುನಿಸೆಫ್ ಪಣತೊಟ್ಟಿದ್ದು, 900 ಸಂಘಗಳನ್ನು ರಚಿಸಲಿದೆ. ಪ್ರತಿಜ್ಞಾ ಪತ್ರ ಬರೆಯಲಿರುವರೆಲ್ಲರೂ ಸದಸ್ಯರಾಗಲಿದ್ದು, ಇವರಿಗೆ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ತರಬೇತಿ ನೀಡಲಾಗುವುದು. ಈ ಪ್ರಕ್ರಿಯೆಯಲ್ಲಿ ಪ್ರತಿಜ್ಞಾಪತ್ರ ಬರೆಸಲು ಯುನಿಸೆಫ್ ಪದಾಧಿಕಾರಿಗಳು ಮುಂದಾಗಿದ್ದು, ಆಗಸ್ಟ್ನಿಂದ ಡಿಸೆಂಬರ್ವರೆಗೆ ನಡೆಯಲಿದೆ.
ಕೊಪ್ಪಳ ಜಿಲ್ಲೆಯಾದ್ಯಂತ 13ರಿಂದ 18 ವರ್ಷದೊಳಗಿನ ಬಾಲಕಿಯರ ಸಂಘಗಳನ್ನು ಸ್ಥಾಪಿಸಲಾಗಿದ್ದು, 15 ದಿನಕ್ಕೊಮ್ಮೆ ಅಂಗನವಾಡಿ ಕೇಂದ್ರದಲ್ಲಿ ಸಭೆ ಸೇರಿ, ಬಾಲ್ಯ ವಿವಾಹ ತಡೆಯ ಬಗ್ಗೆ ಮುಕ್ತವಾಗಿ ಚರ್ಚಿಸಲಿದ್ದು, ಬಾಲ್ಯ ವಿವಾಹ ತ್ಯಜಿಸಲು ಮುಂದಾಗಲಿದ್ದಾರೆ ಎಂದು ಜಿಲ್ಲೆಯ ಯುನಿಸೆಫ್ ಸಂಚಾಲಕ ಹರೀಶ್ ಜೋಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.