ನವದೆಹಲಿ: ಐಟಿ ಉದ್ಯಮದ ಸುಲಲಿತ ವ್ಯವಹಾರ ಮತ್ತು ಐಟಿ ಶಕ್ತಗೊಂಡ ಸೇವೆಗಳನ್ನು ಗುಣಾತ್ಮಕವಾಗಿ ಸುಧಾರಿಸುವ ಉದ್ದೇಶದಿಂದ, ಸರ್ಕಾರವು ಗುರುವಾರ ಕಛೇರಿಯಿಂದ ಹೊರಗೆ ಕೆಲಸ ಮಾಡಲು ಕಂಪನಿಗಳಿಗೆ ನೋಂದಣಿ ಮತ್ತು ಅನುಸರಣೆ ಅವಶ್ಯಕತೆಗಳನ್ನು ತೆಗೆದುಹಾಕಿದೆ. ಇದು ಉದ್ಯೋಗಿಗಳಿಗೆ ಯಾವುದೇ ಸ್ಥಳದಿಂದ ಶಾಶ್ವತವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
ಕೊರೊನಾವೈರಸ್ ಲಾಕ್ಡೌನ್ ಅವಧಿಯಲ್ಲಿ ಸಾಂಪ್ರದಾಯಿಕ ಕಚೇರಿ ಸಂಕೀರ್ಣಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಿಂದ ಕೆಲಸ ಮಾಡುವ ಪ್ರವೃತ್ತಿ ಪ್ರಾರಂಭವಾದ ಬಳಿಕ, ಐಟಿ ಮತ್ತು ಟೆಕ್ ಸಂಸ್ಥೆಗಳು ಮಾಡಿದ ಬೇಡಿಕೆಗಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಡಿಒಟಿಯ ಒಎಸ್ಪಿ ಮಾರ್ಗಸೂಚಿಗಳ ಪ್ರಕಾರ, ಒಎಸ್ಪಿಗಳಿಗೆ ನೋಂದಣಿ ಅಗತ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಮತ್ತು ಡೇಟಾ ಸಂಬಂಧಿತ ಕೆಲಸಗಳಲ್ಲಿ ತೊಡಗಿರುವ ಬಿಪಿಓ ಉದ್ಯಮವನ್ನು ಒಎಸ್ಪಿ ನಿಯಮಗಳ ವ್ಯಾಪ್ತಿಯಿಂದ ಹೊರತೆಗೆಯಲಾಗಿದೆ.
ಇದಲ್ಲದೆ, ಸ್ಥಿರವಾದ ಐಪಿಗಳಿಗಾಗಿ ಬ್ಯಾಂಕ್ ಗ್ಯಾರಂಟಿಗಳ ಠೇವಣಿ, ಆಗಾಗ್ಗೆ ವರದಿ ಮಾಡುವ ಕಟ್ಟುಪಾಡುಗಳು, ನೆಟ್ವರ್ಕ್ ರೇಖಾಚಿತ್ರದ ಪ್ರಕಟಣೆ, ದಂಡ ವಿಧಿಸುವಿಕೆ ಮುಂತಾದ ಅಗತ್ಯತೆಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ದೂರಸಂಪರ್ಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಂತೆಯೇ, ಕಂಪೆನಿಗಳು ‘ಮನೆಯಿಂದ ಕೆಲಸ’ ಮತ್ತು ‘ಎಲ್ಲಿಂದಲಾದರೂ ಕೆಲಸ’ ನೀತಿಗಳನ್ನು ಅಳವಡಿಸಿಕೊಳ್ಳುವುದನ್ನು ತಡೆಯುವ ಹಲವಾರು ಇತರ ಅವಶ್ಯಕತೆಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.