ಕೊಡಗು: ಸಿಕ್ಕಸಿಕ್ಕಲ್ಲಿ ಕಸ ಎಸೆಯುವುದು ಕೆಲವರಿಗೆ ಫ್ಯಾಷನ್ ಆಗಿದೆ. ಆಹಾರದ ಪೊಟ್ಟಣವನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರವನ್ನು ಹಾಳು ಮಾಡುವವರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿ ಇದೆ. ಇಂತಹದೇ ಒಬ್ಬ ವ್ಯಕ್ತಿಗೆ ಕೊಡಗು ಜನತೆ ಸರಿಯಾದ ಪಾಠವನ್ನೇ ಕಳಿಸಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಾ ಪಿಜ್ಜಾ ತಿಂದು ಅದರ ಬಾಕ್ಸ್ ಅನ್ನು ಹೆದ್ದಾರಿಗೆ ಬಿಸಾಕಿದ್ದ ಇಬ್ಬರು ಯುವಕರನ್ನು ಮತ್ತೆ 80 ಕಿಲೋಮೀಟರ್ ವಾಪಸ್ ಬರುವಂತೆ ಮಾಡಿ ಹೆದ್ದಾರಿಯಿಂದ ಬಾಕ್ಸ್ ಅನ್ನು ಹೆಕ್ಕಿಸಿದ್ದಾರೆ.
ಕೊಡಗು ಟೂರಿಸಂ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ರಸ್ತೆಯಲ್ಲಿ ಬಿದ್ದಿದ್ದ ಪಿಜ್ಜಾ ಬಾಕ್ಸ್ ಅನ್ನು ಎತ್ತಿ ನೋಡಿದಾಗ ಅದರಲ್ಲಿ ಪಿಜ್ಜಾ ಆರ್ಡರ್ ಮಾಡಿದ ವ್ಯಕ್ತಿಯ ಫೋನ್ ನಂಬರ್ ದೊರೆತಿತ್ತು. ತಕ್ಷಣವೇ ಆ ವ್ಯಕ್ತಿಗೆ ಸ್ಥಳಕ್ಕೆ ಬಂದು ಶುಚಿಗೊಳಿಸುವಂತೆ ಅವರು ತಿಳಿಸಿದ್ದಾರೆ. ಆದರೆ ಆ ವ್ಯಕ್ತಿ ಸ್ಥಳಕ್ಕೆ ಬರಲು ಒಪ್ಪಿಕೊಂಡಿಲ್ಲ. ಅದಾಗಲೇ ಆತ ಕೊಡಗು ದಾಟಿ ಆಚೆ ಹೋಗಿದ್ದ.
ತಕ್ಷಣವೇ ಫೋನ್ ನಂಬರನ್ನು ಪೊಲೀಸ್ ಠಾಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಯಿತು. ಇದರಿಂದಾಗಿ ಫೋನ್ ಕರೆ ತಾಳಲಾರದೆ ಆ ವ್ಯಕ್ತಿ 80 ಕಿಲೋಮೀಟರ್ ವಾಪಸ್ ಬಂದು ರಸ್ತೆಯಲ್ಲಿ ತಾವು ಹಾಕಿದ ಬಾಕ್ಸ್ ಅನ್ನು ಎತ್ತಿ ಸ್ಥಳವನ್ನು ಶುಚಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.