ಬೆಂಗಳೂರು: ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಹೊರಡಿಸಿದೆ.
ಈ ಹೊಸ ಅಧಿಸೂಚನೆಯಲ್ಲಿ ನೀರಾವರಿ ಜಮೀನನ್ನು ಕೃಷಿಯೇತರ ವಿಚಾರಕ್ಕೆ ಖರೀದಿ ಮಾಡದಂತೆ, ಎಸ್ಸಿ, ಎಸ್ಟಿ ಸಮುದಾಯಗಳ ಜಮೀನನ್ನು ಯಾವುದೇ ಉದ್ದೇಶಕ್ಕಾಗಿ ಬಳಕೆ ಮಾಡಲು ಅವಕಾಶ ನೀಡದಂತೆ ಸುಗ್ರೀವಾಜ್ಞೆಯಲ್ಲಿ ಸರ್ಕಾರ ಆದೇಶ ನೀಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಈ ತಿದ್ದುಪಡಿ ವಿದೇಯಕವನ್ನು ಸರ್ಕಾರ ಮಂಡನೆ ಮಾಡಿತ್ತು.
ಸರ್ಕಾರ ಮಂಡನೆ ಮಾಡಿದ್ದ ಈ ವಿಧೇಯಕಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಎಸ್ಸಿ, ಎಸ್ಟಿ ಸಮದಾಯದ ಜಮೀನು ಖರೀದಿ ನಿಷೇಧ, ನೀರಾವರಿ ಜಮೀನನ್ನು ಕೃಷಿ ಬಿಟ್ಟು ಬೇರೆ ಯಾವುದೇ ವಿಚಾರಕ್ಕೂ ಬಳಕೆ ಮಾಡದಂತೆ ನಿರ್ಬಂಧ, ಒಂದು ಕುಟುಂಬದ ಜನರು ಹೊಂದಬಹುದಾದ ಜಮೀನಿನ ಮಿತಿಯನ್ನು 54 ಎಕರೆಗೆ ಘೋಷಿಸಿ ಸರ್ಕಾರ ತಿದ್ದುಪಡಿ ತರಲು ಸಮ್ಮತಿ ವ್ಯಕ್ತಪಡಿಸಿತ್ತು.
ಇನ್ನು ಈ ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ದೊರೆಯದೇ ಇದ್ದ ಹಿನ್ನೆಲೆಯಲ್ಲಿ ನವೆಂಬರ್ 3 ಕ್ಕೆ ಈ ಸುಗ್ರೀವಾಜ್ಞೆ ನಿರಶನಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜುಲೈ 13 ರಂದು ಹೊರಡಿಸಲಾಗಿದ್ದ ಈ ಸುಗ್ರೀವಾಜ್ಞೆ ಮುಂದಿನ ಆರು ತಿಂಗಳುಗಳ ಕಾಲ ಚಾಲ್ತಿಯಲ್ಲಿರುವಂತೆ ಇದೀಗ ಮತ್ತೆ ಕೆಲವು ಬದಲಾವಣೆ ಮತ್ತು ರಾಜ್ಯಪಾಲರ ಅಂಗೀಕಾರದ ಅನುಮೋದನೆಯ ಮೂಲಕ ಸರ್ಕಾರ ಆದೇಶ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.