ನವದೆಹಲಿ: ರಾಜ್ಯಸಭೆಯಲ್ಲಿ ಬಿಜೆಪಿಯ ಒಟ್ಟು ಸಂಖ್ಯಾಬಲವು ಹಿಂದೆಂದಿಗಿಂತಲೂ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಹಿಂದೆಂದಿಗಿಂತಲೂ ಹೆಚ್ಚು ಕುಸಿತವಾಗಿದೆ.
ಸೋಮವಾರ ಬಿಜೆಪಿಗೆ ಸೇರಿದ 9 ಮಂದಿ ಹೊಸದಾಗಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಬಿಜೆಪಿಯ ಸಂಖ್ಯಾಬಲ 92 ಕ್ಕೆ ಏರಿಕೆಯಾಗಿದೆ.
ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ ಕೇವಲ 38 ಆಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಂಖ್ಯಾಬಲದ ನಡುವಣ ಅಂತರ ಕೂಡ ಹಿಂದೆಂದಿಗಿಂತಲೂ ಹೆಚ್ಚಿದೆ.
245 ಸದಸ್ಯರ ರಾಜ್ಯಸಭೆಯಲ್ಲಿ, ಬಿಜೆಪಿಯ ಮಿತ್ರಪಕ್ಷಗಳು ಈಗ 18 ಸದಸ್ಯರನ್ನು ಹೊಂದಿವೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 13 ಸದಸ್ಯರನ್ನು ಹೊಂದಿದೆ, ಎಐಎಡಿಎಂಕೆ ಮತ್ತು ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ತಲಾ ಒಂಬತ್ತು ಸದಸ್ಯರನ್ನು ಹೊಂದಿದೆ, ಮತ್ತು ಇತರ ಪಕ್ಷಗಳು 63 ಸದಸ್ಯರನ್ನು ಹೊಂದಿವೆ. ಮೂರು ಸ್ಥಾನಗಳು ಖಾಲಿ ಉಳಿದಿವೆ.
ಬಿಜೆಪಿ ನೇತೃತ್ವದ ಎನ್ಡಿಎಗೆ ಸಂಖ್ಯಾ ಬಲ ಹೆಚ್ಚಿರುವುದರಿಂದ ಸರ್ಕಾರ ಇನ್ನು ಮುಂದೆ ಶಾಸನಗಳನ್ನು ಸುಲಭವಾಗಿ ಅಂಗೀಕರಿಸಬಹುದಾಗಿದೆ.
ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಕಾಂಗ್ರೆಸ್ ಒಟ್ಟು ಸಂಖ್ಯೆ 89 ಕ್ಕೆ ಇಳಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.