ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ನವೆಂಬರ್ ತಿಂಗಳಲ್ಲಿ ಮೂರು ವಿಭಿನ್ನ ವರ್ಚುವಲ್ ಸಮಿಟ್ಗಳಲ್ಲಿ ಮೂರು ಬಾರಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 10 ರಂದು ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ, ನವೆಂಬರ್ 17 ರಂದು ಬ್ರಿಕ್ಸ್ ಶೃಂಗಸಭೆ ಮತ್ತು ನವೆಂಬರ್ 21-22ರಂದು ಜಿ 20 ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಉಭಯ ನಾಯಕರು ಭಾಗಿಯಾಗಲಿದ್ದಾರೆ.
ಬ್ರಿಕ್ಸ್ ಮತ್ತು ಎಸ್ಸಿಒ ಗುಂಪಿನ ಅಧ್ಯಕ್ಷನಾದ ರಷ್ಯಾ ಎರಡು ಶೃಂಗಸಭೆಗಳಿಗೆ ಆತಿಥ್ಯ ವಹಿಸಲಿದ್ದು, ಜಿ 20 ಶೃಂಗಸಭೆಯನ್ನು ಸೌದಿ ಅರೇಬಿಯಾ ಆಯೋಜಿಸಲಿದೆ.
ಗಾಲ್ವಾನ್ ಘಟನೆಯ ನಂತರದ ಗಡಿ ಉದ್ವಿಗ್ನತೆಯ ಬಳಿಕ ಇಬ್ಬರು ನಾಯಕರು ಒಟ್ಟಿಗೆ ಸೇರುವುದು ಇದೇ ಮೊದಲು.
ನವೆಂಬರ್ ಅನ್ನು ಈಗಾಗಲೇ ಶೃಂಗಸಭೆಗಳ ತಿಂಗಳು ಎಂದು ಕರೆಯಲಾಗುತ್ತಿದೆ. ಎಸ್ಸಿಒ, ಬ್ರಿಕ್ಸ್ ಮತ್ತು ಜಿ 20 ಹೊರತುಪಡಿಸಿ, ಈ ತಿಂಗಳು 13-15 ನಡುವೆ ಆಸಿಯಾನ್ ವರ್ಚುವಲ್ ಶೃಂಗಸಭೆ ನಡೆಯಲಿದೆ ಮತ್ತು ಎಸ್ಸಿಒ ಸರ್ಕಾರದ ಮುಖ್ಯಸ್ಥರು ನವೆಂಬರ್ 30 ರಂದು ಸಭೆ ಸೇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.