ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ಈ ಮಾರ್ಗಸೂಚಿಯನ್ನು ಶಿಕ್ಷಣ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ, ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಜಾರಿಗೆ ತರಲಾಗಿದೆ. ಈ ಸುತ್ತೋಲೆಯಲ್ಲಿ ಸರ್ಕಾರ ತಿಳಿಸಿದ ಮಾರ್ಗಸೂಚಿ ಅನುಸರಿಸದೆ ಆನ್ಲೈನ್ ತರಗತಿ ನಡೆಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಮಕ್ಕಳ ಕಣ್ಣಿನ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಆನ್ಲೈನ್ ಶಿಕ್ಷಣ ಕಾರಣವಾಗುತ್ತಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಈ ಮಾರ್ಗಸೂಚಿಯನ್ವಯ ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ವಾರದಲ್ಲಿ 3 ದಿನ ಆನ್ಲೈನ್ ತರಗತಿ, 3-5 ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ ಆನ್ಲೈನ್ ತರಗತಿಗಳಾಗಿ ವಿಂಗಡಿಸಿದೆ. 1-5 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರತಿ ಆನ್ಲೈನ್ ತರಗತಿಯಲ್ಲಿ 30 ನಿಮಿಷಗಳ ಕಾಲ ಪಾಠ ಮಾಡಲು ಸೂಚಿಸಲಾಗಿದೆ. ಉಳಿದಂತೆ ಹಿಂದಿನ ಆನ್ಲೈನ್ ತರಗತಿ ಮಾರ್ಗಸೂಚಿಯಂತೆಯೇ ತರಗತಿಗಳು ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ.
ಕೆಜಿ ಮಕ್ಕಳಿಗೆ ವಾರದ 3 ದಿನ ತಲಾ 30 ನಿಮಿಷಗಳಂತೆ ಆನ್ಲೈನ್ ತರಗತಿಯನ್ನು ಪೋಷಕರ ಸಮ್ಮುಖದಲ್ಲೇ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. 1,2 ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 3 ದಿನ, ದಿನಕ್ಕೆ 2 ಅವಧಿಯಂತೆ 30 ನಿಮಿಷಗಳ ತರಗತಿ ತೆಗೆದುಕೊಳ್ಳಬಹುದು. 3-5 ನೇ ತರಗತಿಗೆ ವಾರದಲ್ಲಿ 5 ದಿನ, ದಿನಕ್ಕೆ 2 ಅವಧಿಗಳಂತೆ ತಲಾ 30 ನಿಮಿಷ ಪಾಠ ಮಾಡಬಹುದು. 6-8 ನೇ ತರಗತಿಗಳ ಮಕ್ಕಳಿಗೆ ವಾರದಲ್ಲಿ 5 ದಿನ ದಿನಕ್ಕೆ 3 ಅವಧಿಯಂತೆ 30 ರಿಂದ 45 ನಿಮಿಷಗಳ ತರಗತಿ ನಡೆಸಬಹುದಾಗಿದೆ. 9-10 ನೇ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ 4 ಅವಧಿಗಳಂತೆ 30 ರಿಂದ 45 ನಿಮಿಷ ಆನ್ಲೈನ್ ತರಗತಿಗಳನ್ನು ನಡೆಸಬಹುದು ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.