ನವದೆಹಲಿ: ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕು ವ್ಯಾಪಿಸುವ ಪ್ರಮಾಣ ದೇಶದಲ್ಲಿ ಇಳಿಮುಖವಾಗುತ್ತಿದೆ. ಸತತ ನಾಲ್ಕನೇ ದಿನವೂ ದೇಶದಲ್ಲಿ 50 ಸಾವಿರಕ್ಕೂ ಕಡಿಮೆ ಕೊರೋನಾ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಂದು ದೇಶದಲ್ಲಿ 49,881 ಕೊರೋನಾ ಪಾಸಿಟಿವ್ ಕೇಸ್ಗಳು ದಾಖಲಾಗಿದೆ. ಆ ಮೂಲಕ ದೇಶದಲ್ಲಿ ಸದ್ಯ ಸೋಂಕಿಗೆ ತುತ್ತಾದವರ ಸಂಖ್ಯೆ 80,40,203 ಆಗಿದೆ. ಒಂದೇ ದಿನದಲ್ಲಿ 517 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ ಎಂದು ಸಚಿವಾಲಯ ವರದಿಯಲ್ಲಿ ತಿಳಿಸಿದೆ. ಕೊರೋನಾದಿಂದ ಈ ವರೆಗೆ ದೇಶದಲ್ಲಿ 1,20,527 ಜನರು ಮೃತಪಟ್ಟಿದ್ದಾರೆ ಎಂದೂ ಸಚಿವಾಲಯವು ಮಾಹಿತಿ ನೀಡಿದೆ.
ಕೊರೋನಾದಿಂದ ನಿನ್ನೆ 56,480 ಮಂದಿ ಗುಣಮುಖರಾಗುವ ಮೂಲಕ, ಚೇತರಿಸಿಕೊಂಡವರ ಸಂಖ್ಯೆ 73,15,989 ರಷ್ಟಾಗಿದೆ. ಸಕ್ರಿಯ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ 10,75,760 ಕೊರೋನಾ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.