ಬೆಂಗಳೂರು: ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಏಕಕಾಲಕ್ಕೆ 10 ಉಪಗ್ರಹಗಳನ್ನು ಬಾನಂಗಳಕ್ಕೆ ಹಾರಿಸಲು ಸಿದ್ಧತೆ ನಡೆಸಿದೆ.
PSLV-C49 ಮೂಲಕ E9S-1 ಮತ್ತು ಇತರ 9 ಉಪಗ್ರಹಗಳನ್ನು 2020 ರ ನವೆಂಬರ್ 7 ರಂದು ಅಪರಾಹ್ನ 3.02 ಗಂಟೆಗೆ ಉಡಾವಣೆ ಮಾಡಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಉಪಗ್ರಹಗಳನ್ನು ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ನಲ್ಲಿ ಉಡಾಯಿಸುವುದಾಗಿಯೂ ಇಸ್ರೋ ತಿಳಿಸಿದೆ.
EOS-01 ಕೃಷಿ, ಅರಣ್ಯ ರಕ್ಷಣೆ, ವಿಪತ್ತು ನಿರ್ವಹಣೆ ಮೊದಲಾದ ವಿಷಯಗಳಿಗೆ ಬಳಕೆಯಾಗಲಿದೆ. ಅಂತರರಾಷ್ಟ್ರೀಯ ಉಪಗ್ರಹ ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಉಡಾವಣೆ ಮಾಡುತ್ತಿರುವುದಾಗಿ ಇಸ್ರೋ ಹೇಳಿದೆ. ಈ ಉಡಾವಣೆಯ ಲೈವ್ ಅನ್ನು ಇಸ್ರೋ ವೆಬ್ಸೈಟ್, ಯೂಟ್ಯೂಬ್, ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ವೀಕ್ಷಿಸಬಹುದು ಎಂದು ಇಸ್ರೋ ತಿಳಿಸಿದೆ.
#ISRO #PSLVC49 set to launch #EOS01 and 9 Customer Satellites from Satish Dhawan Space Centre in Sriharikota at 1502 Hrs IST on Nov 7, 2020, subject to weather conditions.
For details visit: https://t.co/0zULuciUep pic.twitter.com/VFPxWNdPKe
— ISRO (@isro) October 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.