ಬೆಂಗಳೂರು: ಭಾರತದ ರೈಲುಗಳಿಗೆ ಆಕ್ಸೆಲ್ ಮತ್ತು ಚಕ್ರ ತಯಾರಿಸಿ ಕೊಡುವ ಬೆಂಗಳೂರಿನ ಯಲಹಂಕದ ಆರ್ಡಬ್ಲ್ಯುಎಫ್ ರೈಲು ಚಕ್ರ ನಿರ್ಮಾಣ ಕಾರ್ಖಾನೆ ತನ್ನ ಉತ್ಪಾದನೆಯನ್ನು ವಿದೇಶಕ್ಕೆ ರಫ್ತು ಮಾಡುವ ಅವಕಾಶ ತನ್ನದಾಗಿಸಿಕೊಂಡಿದೆ.
ಆಫ್ರಿಕಾದ ಮೊಜಾಂಬಿಕ್ ಎಂಬ ಸಂಸ್ಥೆ ಈ ಸಂಬಂಧ ಆರ್ಡಬ್ಲ್ಯುಎಫ್ಗೆ 1485 ಲೋಕೋಮೋಟಿವ್ ಚಕ್ರಗಳು ಮತ್ತು ಆಕ್ಸೆಲ್ ತಯಾರಿಸಿ ನೀಡುವಂತೆ ಮನವಿ ಮಾಡಿಕೊಂಡಿತ್ತು. ಈಗಾಗಲೇ ಮೊದಲ ಹಂತದಲ್ಲಿ ಇವುಗಳನ್ನು ಆಫ್ರಿಕಾಗೆ ರಫ್ತು ಮಾಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ಮೊದಲ ಹಂತದಲ್ಲಿ 90 ಚಕ್ರಗಳು ಮತ್ತು 45 ಆಕ್ಸೆಲ್ಗಳನ್ನು ಈಗಾಗಲೇ ರವಾನೆ ಮಾಡಲಾಗಿದೆ. ಆಫ್ರಿಕಾದ ಮೊಜಾಂಬಿಕ್ ಜೊತೆಗಿನ ಈ ಒಪ್ಪಂದ ಸಂಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ. 8.13 ಕೋಟಿ ರೂ. ಗಳ ಒಪ್ಪಂದ ಇದಾಗಿದ್ದು, 990 ಚಕ್ರಗಳು ಮತ್ತು 495 ಆಕ್ಸೆಲ್ಗಳಿಗೆ ಸಂಬಂಧಿಸಿದಂತೆ ಮಾಡಿಕೊಳ್ಳಲಾಗಿದೆ ಎಂದು ಆರ್ಡಬ್ಲ್ಯುಎಫ್ ಜನರಲ್ ಮ್ಯಾನೇಜರ್ ರಾಜೀವ್ ಕುಮಾರ್ ವ್ಯಾಸ್ ತಿಳಿಸಿದ್ದಾರೆ. ಇನ್ನು ಆರ್ಡಬ್ಲ್ಯುಎಫ್ ಸಂಸ್ಥೆ 1984 ರಲ್ಲಿ ಪ್ರಾರಂಭವಾಗಿದ್ದು, ಈ ವರೆಗೆ ಸುಮಾರು 4 ದಶಲಕ್ಷ ಚಕ್ರಗಳನ್ನು ತಯಾರಿಸಿ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.