ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಅಗತ್ಯವಾಗಿ ಪಾಲಿಸುವಂತೆ ಮಾಡಲು ಬಿಬಿಎಂಪಿ ಹೊಸ ಆದೇಶವೊಂದನ್ನು ಹೊರಡಿಸಿದೆ.
ಜೊತೆಗೆ ಮಾರ್ಷಲ್ಗಳಿಗೆ ದಿನಕ್ಕೆ ನಿಯಮ ಮೀರಿದ ಕನಿಷ್ಠ 20 ಮಂದಿಗಾದರೂ ದಂಡ ಹಾಕಲೇ ಬೇಕು ಎಂದೂ ಟಾರ್ಗೆಟ್ ಹೇರಲಾಗಿದೆ. ಈ ನಿಯಮ ಪಾಲನೆ ಆಗದೇ ಹೋದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಬಿಬಿಎಂಪಿ ನೀಡಿದೆ.
ಬಿಬಿಎಂಪಿ ಈ ಆದೇಶ ನೀಡಿರುವ ಬಳಿಕ ಪೊಲೀಸರಿಗೂ ಇದೊಂದು ಸವಾಲಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಯಾರೇ ಆದರೂ ಕೊರೋನಾ ನಿಯಂತ್ರಣ ನಿಯಮಗಳನ್ನು ಪಾಲಿಸದೇ ಹೋದಲ್ಲಿ ಅಥವಾ ತಪ್ಪಿದಲ್ಲಿ ದಂಡ ತೆರಬೇಕಾಗುವುದು ನಿಶ್ಚಿತ ಎಂಬಂತಾಗಿದೆ. ಅಲ್ಲದೆ ಮಾನವೀಯತೆ, ಕನಿಕರದ ದೃಷ್ಟಿಯಿಂದ ಮಾಸ್ಕ್ ಧರಿಸದವರು, ಸಾಮಾಜಿಕ ಅಂತರ ಕಾಪಾಡದವರನ್ನು ಎಚ್ಚರಿಕೆ ನೀಡಿ ಕಳುಹಿಸಲು ಸಹ ಮಾರ್ಷಲ್ಗಳಿಗೆ ಸಾಧ್ಯವಿಲ್ಲ ಎಂಬಂತಾಗಿದೆ.
ಅದರಂತೆ ಅಲ್ಲಲ್ಲಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ನಡೆಸುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣು ಇದ್ದೇ ಇರಲಿದೆ. ಇದನ್ನು ಗಣನೆಗೆ ತೆಗೆದುಕೊಳ್ಳದೆ ಓಡಾಟ ನಡೆಸಿದಲ್ಲಿ ದಂಡ ತೆರುವುದು ನಿಶ್ಚಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.