ಮೈಸೂರು: ನಾಡಹಬ್ಬ ದಸರಾದ ಮೇಲೆಯೂ ಕೊರೋನಾ ಕರಿ ನೆರಳು ಹಬ್ಬಿದೆ. ಪ್ರತಿ ಬಾರಿಯೂ ದೇಶ ವಿದೇಶಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ದಸರಾ ಜಂಬೂ ಸವಾರಿಯ ಮೇಲೂ ಕೊರೋನಾ ಎಫೆಕ್ಟ್ ಆಗಿದ್ದು, ನಾಳೆ ಕೇವಲ ಅರಮನೆಯ ಆವರಣದಲ್ಲಷ್ಟೇ ಜಂಬೂ ಸವಾರಿ ನಡೆಯಲಿದೆ.
ಕೇವಲ ಸಾಂಪ್ರದಾಯಿಕ ಆಚರಣೆಗಳನ್ನು ಮಾತ್ರವೇ ಆಚರಿಸುವ ಮೂಲಕ ಈ ಬಾರಿಯ ಜಂಬೂ ಸವಾರಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ವಿಜೃಂಭಣೆಗೂ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಹಾಗೆಯೇ, ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಗಿಜಿಗುಡುತ್ತಿದ್ದ ಜನಸ್ತೋಮಕ್ಕೂ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ನಿಯಂತ್ರಣ ಹೇರಲಾಗಿದೆ.
ನಾಳೆ ಮಧ್ಯಾಹ್ನ 2.59-3,20 ರ ನಡುವಿನ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ 3.40-4.15 ರ ನಡುವೆ ವಿಜಯ ದಶಮಿ, ಜಂಬೂ ಸವಾರಿಗೂ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಬಾರಿ ಅಭಿಮನ್ಯು ಆನೆ ಸೇರಿ ಐದು ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ.
ಈ ಸಂದರ್ಭದಲ್ಲಿ ಕೇವಲ 300 ಮಂದಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಭಾಗವಹಿಸುವವರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಎಂದೂ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.