ನವದೆಹಲಿ: 370ನೇ ವಿಧಿ ರದ್ದತಿ ಬಳಿಕ 14 ತಿಂಗಳು ಬಂಧನದಲ್ಲಿದ್ದು ಇದೀಗ ಬಿಡುಗಡೆಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಮತ್ತೊಮ್ಮೆ ಭಾರತ ವಿರೋಧಿ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿ ಮಾಡಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಧ್ವಜ ಮತ್ತೆ ಮರಳಿದರೆ ಮಾತ್ರ ನಾವು ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ . ಜಮ್ಮು ಮತ್ತು ಕಾಶ್ಮೀರದ ಧ್ವಜದ ಕಾರಣದಿಂದಾಗಿ ಮಾತ್ರ ರಾಷ್ಟ್ರಧ್ವಜ ನಮ್ಮ ರಾಜ್ಯದಲ್ಲಿ ಇದೆ. ನಮ್ಮ ಧ್ವಜದ ಕಾರಣದಿಂದಾಗಿ ನಾವು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದಿದ್ದಾರೆ.
ಮುಫ್ತಿ ಅವರ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಖಂಡಿಸಿದ್ದಾರೆ. “ಮೆಹಬೂಬಾ ಮುಫ್ತಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಮತ್ತು ಜೈಲಿಗಟ್ಟಬೇಕು ಎಂದು ನಾನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಬಳಿ ಮನವಿ ಮಾಡುತ್ತೇನೆ” ಎಂದಿದ್ದಾರೆ.
“ರಾಷ್ಟ್ರಧ್ವಜಕ್ಕಾಗಿ, ತಾಯ್ನಾಡಿಗಾಗಿ ನಮ್ಮ ರಕ್ತದ ಪ್ರತಿ ಹನಿಯನ್ನೂ ತ್ಯಾಗ ಮಾಡುತ್ತೇವೆ. ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಭಾಗ. ಹೀಗಾಗಿ ಅಲ್ಲಿ ಕೇವಲ ಒಂದು ಧ್ವಜ ಮಾತ್ರ ಹಾರಾಡಬೇಕು, ಅದು ನಮ್ಮ ರಾಷ್ಟ್ರ ಧ್ವಜವಾಗಿರಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.