ಜೈಪುರ: ಬರೋಬ್ಬರಿ 172 ಸಾವಿರ ವರ್ಷಗಳ ಹಿಂದೆ ರಾಜಸ್ಥಾನದ ಬಿಕಾನೆರ್ ಸಮೀಪದ ಮಧ್ಯ ಥಾರ್ ಮರುಭೂಮಿಯಲ್ಲಿ ಕಣ್ಮರೆಯಾಗಿದ್ದ ನದಿಯೊಂದು ಈಗ ಪತ್ತೆಯಾಗಿದೆ. ನದಿಯ ಕುರುಹು ಪತ್ತೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಆ ನದಿ ಜೀವಸೆಲೆಯಾಗಿದ್ದಿರಬಹುದು ಎಂದು ಅಭಿಪ್ರಾಯಿಸಿದ್ದಾರೆ.
ಜರ್ಮನಿಯ ದಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿ, ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯ ಮತ್ತು ಐಐಎಸ್ಇಆರ್ ಕೋಲ್ಕತ್ತಾದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಅಲ್ಲದೇ, ಅವರು ನಡೆಸಿದ ಅಧ್ಯಯನವು ಶಿಲಾಯುಗದ ಮಾನವ ಇಂದು ನಾವು ಕಾಣುತ್ತಿರುವುದಕ್ಕಿಂತ ಬೇರೆಯದೇ ಆದ ಥಾರ್ ಮರುಭೂಮಿ ಭೂಪ್ರದೇಶದಲ್ಲಿ ವಾಸಿಸಿದ್ದತು ಎಂಬುದನ್ನು ಹೇಳಿದೆ.
’Quaternary Science Reviews’ ಎಂಬ ಪತ್ರಿಕೆಯಲ್ಲಿ ಈ ಬಗ್ಗೆ ಸಂಶೋಧನಾ ಲೇಖನವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಮಧ್ಯ ಥಾರ್ ಮರುಭೂಮಿಯ ನಲ್ ಕ್ವಾರಿಯಲ್ಲಿ ನದಿಯೊಂದು ಹರಿಯುತ್ತಿತ್ತು ಎಂಬ ಬಗ್ಗೆ ಪುರಾತನ ದಾಖಲೆಗಳನ್ನು ಒದಗಿಸಿದೆ. ಸುಮಾರು 172 ಸಾವಿರ ವರ್ಷಗಳ ಹಿಂದಿನ ಮಾನವ ಚಟುವಟಿಕೆಯನ್ನು ಈ ಲೇಖನ ಪುಷ್ಟೀಕರಿಸುತ್ತದೆ. ಈ ನದಿಯು ರಾಜಸ್ಥಾನದ ಬಿಕನೇರ್ ಸಮೀಪವಿದ್ದು ಪ್ರಸ್ತುತ ಹರಿಯುತ್ತಿರುವ ನದಿಯಿಂದ 200 ಕಿಲೋಮೀಟರ್ ದೂರದಲ್ಲಿತ್ತು ಎಂದು ಹೇಳಿದೆ.
ಈ ಸಂಶೋಧನೆಗಳು ಥಾರ್ ಮರುಭೂಮಿಯಾದ್ಯಂತದ ಆಧುನಿಕ ನದಿ ಶೋಧನೆ ಪುರಾವೆಗಳನ್ನು ಹಾಗೂ ಘಗ್ಗರ್-ಹಕ್ರಾ ನದಿಯ ಮರೆಯಾದ ಮಾರ್ಗವನ್ನು ತೋರಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಉಪಗ್ರಹ ಚಿತ್ರಣದ ಅಧ್ಯಯನಗಳು ಥಾರ್ ಮರುಭೂಮಿಯನ್ನು ಹಾದುಹೋಗುವ ನದಿ ಕಾಲುವೆಗಳ ದಟ್ಟವಾದ ಜಾಲವನ್ನು ತೋರಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.
“ಈ ಅಧ್ಯಯನಗಳು ಹಿಂದೆ ನದಿಗಳು ಮತ್ತು ತೊರೆಗಳು ಎಲ್ಲಿ ಹರಿಯುತ್ತವೆ ಎನ್ನುವುದನ್ನು ಸೂಚಿಸಿದೆ. ಆದರೆ ಯಾವಾಗ ಇಲ್ಲಿ ನದಿಗಳಿದ್ದವೆನ್ನುವುದನ್ನು ಅದು ಹೇಳಲು ಸಾಧ್ಯವಿಲ್ಲ. ” ಎಂದು ಅಣ್ಣಾ ವಿಶ್ವವಿದ್ಯಾಲಯದ ಪ್ರೊಫೆಸರ್ ಹೇಮಾ ಅಚ್ಯುತನ್ ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.