ಬೆಂಗಳೂರು: ನಗರದ ಕೆಂಪೇಗೌಡ ವಿಮಾನ ನಿಲ್ದಾಣ ಪೂರ್ವ ಕೊರೋನಾ ಮಾರ್ಗಗಳಿಗೆ 51 ದೇಶೀಯ ವಿಮಾನಗಳ ಮರು ಸಂಪರ್ಕ ಗುರಿಯನ್ನು 88% ಗಳಷ್ಟು ಸಾಧಿಸಿರುವುದಾಗಿ ವಿಮಾನ ನಿಲ್ದಾಣದ ನಿರ್ವಾಹಕರು ಮಾಹಿತಿ ನೀಡಿದ್ದಾರೆ.
ಕೊರೋನಾ ಪೂರ್ವದಲ್ಲಿ ಹಾರಾಟ ನಡೆಸುತ್ತಿದ್ದ ಮಾರ್ಗಗಳಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 88% ಮತ್ತು ವಿಮಾನ ಆಗಮನ-ನಿರ್ಗಮನದಲ್ಲಿ 55% ಗಳಷ್ಟು ಪ್ರಗತಿ ಸಾಧಿಸಿದೆ ಎಂಬ ಅಧಿಕೃತ ವರದಿಯನ್ನು ವಿಮಾನ ನಿಲ್ದಾಣದ ನಿರ್ವಾಹಕರು ಬಿಡುಗಡೆ ಮಾಡಿದ್ದಾರೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಬೆಂಗಳೂರು ಏರ್ಪೋರ್ಟ್ನಿಂದ 22ಅಂತರರಾಷ್ಟ್ರೀಯ ಸ್ಥಳಗಳಿಗೆ ವಂದೇ ಭಾರತ್ ಮಿಷನ್, ಏರ್ ಬಬ್ಲ್ ಯೋಜನೆಯಡಿ ವಿಮಾನ ಸಂಪರ್ಕ ಕಲ್ಪಿಸಲಾಗಿತ್ತು. ಲಾಕ್ಡೌನ್ ಸಡಿಲಿಕೆ ಬಳಿಕ ಕಳೆದ ವರ್ಷದ 53% ದಷ್ಟು ವಿಮಾನ ಹಾರಾಟದಲ್ಲಿ ಪ್ರಗತಿ ಸಾಧಿಸಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ದೇಶದ ಅತೀ ಹೆಚ್ಚು ಸರಕು ಸಾಗಾಟ ವಿಮಾನಗಳ ಹಾರಾಟವೂ ನಡೆದಿದೆ ಎಂದು ಈ ವರದಿ ಮಾಹಿತಿ ನೀಡಿದೆ. ಈ ತಿಂಗಳು ಅಂತರರಾಷ್ಟ್ರೀಯ ಸರಕು ಸಾಗಾಟದಲ್ಲಿ 4.5% ಬೆಳವಣಿಗೆಯಾಗಿದೆ ಎಂದೂ ವರದಿ ಮಾಹಿತಿ ನೀಡಿದೆ.
7.6% ರಷ್ಟು ಸರಕುಗಳನ್ನು ರಫ್ತು ಮಾಡುವ ವಿಮಾನಗಳು ಹಾರಾಟ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 5.2% ದಷ್ಟು ಕಡಿಮೆ ಪ್ರಮಾಣದಲ್ಲಿ ಸರಕು ಸಾಗಾಟ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.