ಹೊಸಕೋಟೆ: ತಾಲೂಕಿನ ಸಮೇತನ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಳೂರು ಗ್ರಾಮದಲ್ಲಿ ಸೋಲಾರ್ ಸಹಿತ ಪವನ ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾಯೋಗಿಕವಾಗಿ ನಿರ್ಮಾಣ ಮಾಡಲಾಗಿದೆ.
ಈ ಯೋಜನೆಯ ಮೂಲಕ ಗ್ರಾಮದ 20 ರಸ್ತೆ ಬದಿಯ ಸ್ಟ್ರೀಟ್ ಲೈಟ್ಗಳಿಗೆ ವಿದ್ಯುತ್ ಸರಬರಾಜು ಮಾಡುವ ಜೊತೆಗೆ ಗ್ರಾಮದ ಮಧ್ಯಭಾಗದಲ್ಲಿನ ವೃತ್ತದಲ್ಲಿ ಹೈಮಾಸ್ ದ್ವೀಪಗಳನ್ನು ಅಳವಡಿಸುವ ಮೂಲಕ ಹೀಗೂ ಸಾಧ್ಯ ಎಂಬುದನ್ನು ಸಾಧಿಸಿ ಉಳಿದ ಗ್ರಾಮಗಳಿಗೂ ಮಾದರಿಯಾಗಿದೆ. ಸೋಲಾರ್ ಶಕ್ತಿಯ ಮೂಲಕ ಇಡೀ ಗ್ರಾಮವನ್ನು ಬೆಳಗುವ ಮೂಲಕ ಆತ್ಮನಿರ್ಭರ ಭಾರತದ ಸ್ವಾವಲಂಬಿ ಕಲ್ಪನೆಗೆ ಮತ್ತೊಂದು ಮಾದರಿ ಗೆಲುವನ್ನು ತಂದುಕೊಟ್ಟಿದೆ ಎನ್ನಬಹುದು.
ರಾಜ್ಯದಲ್ಲೇ ಇದೇ ಪ್ರಪ್ರಥಮ ಬಾರಿಗೆ ಎಂಬಂತೆ ಗ್ರಾಮದಲ್ಲಿ ಸುಮಾರು 4.9 ಲಕ್ಷ ರೂ.ಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಆ ಮೂಲಕ ಸ್ವಯಂ ವಿದ್ಯುತ್ ಉತ್ಪಾದನೆಯ ಮೂಲಕ ಸಂಪೂರ್ಣ ಗ್ರಾಮಕ್ಕೆ ಬೆಳಕು ನೀಡುವ ಕೆಲಸ ಮಾಡಲಾಗಿದೆ. ಈ ಯೋಜನೆಯಿಂದಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವ ಸಂಕಷ್ಟ ಸಹ ದೂರವಾಗಲಿದೆ ಎಂದು ಗ್ರಾ. ಪಂ. ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ 6 ತಿಂಗಳುಗಳ ಹಿಂದೆ ಗ್ರಾಮದ ನಡವತ್ತಿ ಪ್ರದೇಶದ ಬೀದಿ ದೀಪಗಳನ್ನು ಸೋಲಾರ್ ಮೂಲಕ ಬಳಕೆ ಮಾಡಿ, ವಿದ್ಯುತ್ ಉಳಿಸುವ ಕಾರ್ಯದಲ್ಲಿ ಸ್ವಾವಲಂಬನೆ ಸಾಧಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.