ಬೆಂಗಳೂರು: ಚಾಮರಾಜನಗರದಲ್ಲಿನ ಮಹಿಳಾ ಕಾನ್ಸ್ಟೇಬಲ್ ತರಬೇತಿ ಪಡೆಯುತ್ತಿರುವ ಒಬ್ಬರು ಬಿಎ ಎಕನಾಮಿಕ್ಸ್ನಲ್ಲಿ ಮೈಸೂರು ವಿವಿಯಿಂದ ನಾಲ್ಕು ಚಿನ್ನದ ಪದಕ ಮತ್ತು ಏಳು ನಗದು ಬಹುಮಾನ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.
ನಂಜನಗೂಡಿನ ಕೂಡ್ಲಾಪುರ ಗ್ರಾಮದ ಬೆಳ್ಳ ಶೆಟ್ಟಿ ಎಂಬವರ ಪುತ್ರಿ ಕಾವೇರಿ ಅವರು ಕಡು ಬಡತನದಲ್ಲಿಯೂ ಓದಿ ಈ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಇವರು ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ಪದವಿ ಪರೀಕ್ಷೆಯ ಬಳಿಕ ಕಾನ್ಸ್ಟೇಬಲ್ ಹುದ್ದೆಗೂ ನೇಮಕವಾಗಿರುವ ಅವರು ಸದ್ಯ ತರಬೇತಿಯಲ್ಲಿದ್ದಾರೆ.
ಸದ್ಯ ಇವರು ನೌಕರಿಯ ಜೊತೆಗೆಯೇ ಪಿಎಸ್ಐ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸುತ್ತಿದ್ದಾರೆ. ಇವರ ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿರುವ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರ ತೋಮಸ್ ಇವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.