ನ್ಯೂಯಾರ್ಕ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ,ಚಂದ್ರನಲ್ಲಿ 4 ಜಿ ಅಂತರ್ಜಾಲ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ.
ಈ ಸಂಬಂಧ ಕಾರ್ಯ ನಿರ್ವಹಿಸಲು ನೋಕಿಯಾ ಸೇರಿದಂತೆ ಇನ್ನಿತರ ಟೆಲಿಕಾಂ ಸಂಸ್ಥೆಗಳು ಗುತ್ತಿಗೆ ಪಡೆದಿವೆ. ಚಂದ್ರನಲ್ಲಿ 4 ಜಿ / ಎಲ್ಟಿಇ ಜಾಲ ಸ್ಥಾಪಿಸಿ ಬಳಿಕ ಅದನ್ನು 5 ಜಿ ಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ನೋಕಿಯಾ ಚಿಂತನೆ ನಡೆಸಿರುವುದಾಗಿಯೂ ತಿಳಿದು ಬಂದಿದೆ. ನಾಸಾದ ಟಿಪ್ಪಿಂಗ್ ಪಾಯಿಂಟ್ ಪ್ರಕ್ರಿಯೆಯ ಅನ್ವಯ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಮತ್ತು ಸಂಶೋಧನಾ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಇದರ ಮೂಲಕ ಚಂದ್ರನ ಮೇಲೆ ಈ ದಶಕದಾಂತ್ಯದೊಳಗೆ ಖಾಯಂ ಆರ್ಟೆಮಿಸ್ ಕಾರ್ಯಕ್ರಮ ಜಾರಿಗೆ ಅಗತ್ಯವೆನಿಸಿದ ತಂತ್ರಜ್ಞಾನ ಅಭಿವೃದ್ಧಿ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಈ ವ್ಯವಸ್ಥೆಯ ಮೂಲಕ ಚಂದ್ರನ ಮೇಲ್ಮೈ ಮೇಲೆ ಅತ್ಯಂತ ದೂರ, ವೇಗ ಮತ್ತು ದಕ್ಷ ಸಂವಹನಕ್ಕೆ ಪೂರಕವಾಗುವಂತೆ ಕಾರ್ಯತಂತ್ರ ರೂಪಿಸಿರುವುದಾಗಿಯೂ ನಾಸಾ ಮಾಹಿತಿ ನೀಡಿದೆ.
ಅದರಂತೆ ಚಂದ್ರನ ಮೇಲೆ ಹೆಚ್ಚು ಸಮಯ ಬಾಳಿಕೆ ಬರುವ ಇಂಧನ ವ್ಯವಸ್ಥೆಯೂ ಅಗತ್ಯವಾಗಿದೆ. ಜೊತೆಗೆ ಚಂದ್ರನ ಮೇಲೆ ಮಾನವ ಬದುಕಬಲ್ಲ, ವಲಸೆ ಹೋಗುವ ಸಾಮರ್ಥ್ಯವನ್ನು ಸಹ ಆಭಿವೃದ್ಧಿ ಮಾಡಬೇಕಾಗಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರನ ಮೇಲೆ ಎಲ್ಟಿಇ ನೆಟ್ವರ್ಕ್ ಸ್ಥಾಪನೆಗೆ 2018ರಲ್ಲೇ ನೋಕಿಯಾ ಪ್ರಯತ್ನ ನಡೆಸಿತ್ತು. ಈ ಕಾರ್ಯಕ್ಕೆ ಜರ್ಮನಿಯ ಬಾಹ್ಯಾಕಾಶ ಸಂಸ್ಥೆ ಪಿಟಿ ಸೈಂಟಿಸ್ಟ್ಸ್, ಬ್ರಿಟನ್ನ ವೊಡಾಫೋನ್ ಅಪೊಲೋ ಲ್ಯಾಂಡಿಂಗ್ ಗಾಗಿ ನೆಟ್ವರ್ಕ್ ಸ್ಥಾಪಿಸಲು ಕೈಜೋಡಿಸಿತ್ತು. ಆದರೆ ಈ ಯೋಜನೆ ಯಶಸ್ವಿಯಾಗಿರಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.