ಬೆಳಗಾವಿ: ನಾರಿಯರ ಅಚ್ಚುಮೆಚ್ಚಿನ ಬೆಳಗಾವಿಯ ಸುಪ್ರಸಿದ್ಧ ಶಹಾಪುರ ಸೀರೆ ವಿದೇಶದಲ್ಲಿನ ಜನರನ್ನು ಸೆಳೆದಿದೆ. ಸರಳ, ಸುಂದರ, ಉತ್ತಮ ನೇಯ್ಗೆಯ ಕಾರಣಕ್ಕೆ ಹೆಸರು ಪಡೆದಿರುವ ಈ ಸೀರೆಗಳು ಇದೀಗ ಅಮೆರಿಕದ ಗ್ರಾಹಕರನ್ನು ತನ್ನತ್ತ ಆಕರ್ಷಿಸಿ, ವಿದೇಶೀ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಸಾಮಾಜಿಕ ಜಾಲತಾಣಗಳು ಮತ್ತು ಸಂಘಟನೆಗಳ ಸಹಕಾರದಿಂದ ಶಹಾಪುರ ಸೀರೆಗಳು ತಮ್ಮ ಮಾರಾಟ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವಂತಾಗಿದೆ. ನೇಕಾರ ಉಮೇಶ್ ಕೊಕಡೊಳ್ಳಿ, ಬನಹಟ್ಟಿಯ ಬಸವಾರಾಜ್ ಕಟಗಿ ನೇಯ್ಗೆಯ ಸೀರೆ ಅವರು ತಯಾರಿಸಿದ ಸೀರೆ ಸೇವಾ ಕಾರ್ಟ್ ಎಂಬ ಆನ್ಲೈನ್ ಪೋರ್ಟಲ್ ಮೂಲಕ ಅಮೆರಿಕದ ಗ್ರಾಹಕರ ಮನಗೆದ್ದು, ಅಮೆರಿಕದ ಮಾರುಕಟ್ಟೆಯಲ್ಲಿಯೂ ಸ್ಥಾನ ಪಡೆದಿದೆ.
ಕೊರೋನಾ ಅವಧಿಯಲ್ಲಿ ಬೆಳಗಾವಿಯ ನೇಕಾರರ ಸೀರೆಗಳು ಮಾರಾಟವಾಗದೆ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ನೇಕಾರರ ನೆರವಿಗೆ ಧಾವಿಸಿದ ಬೆಳಗಾವಿಯ ಸೇವಾ ಭಾರತಿಯ ಸಾಮಾಜಿಕ ಕಾರ್ಯಕರ್ತರು ಅವುಗಳನ್ನು ಆನ್ಲೈನ್, ವಿವಿಧ ಮೇಳಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದರು. ಇದರಿಂದ ಬೆಳಗಾವಿಯ ಸೀರೆಗಳು ರಾಜ್ಯ, ಅಂತರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಜನರನ್ನು ಆಕರ್ಷಿಸಿ, ವಿದೇಶಗಳಲ್ಲಿಯೂ ಮಾರುಕಟ್ಟೆ ಗಿಟ್ಟಿಸಿಕೊಂಡವು. ಜೊತೆಗೆ ಈ ಸೀರೆಗಳಿಗೆ ಭಾರೀ ಬೇಡಿಕೆಯೂ ಹುಟ್ಟಿಕೊಂಡಿತು.
ಇದನ್ನು ಗಮನಿಸಿದ ಕಾರ್ಯಕರ್ತರು ಸೇವಾ ಕಾರ್ಟ್ ಎಂಬ ಆನ್ಲೈನ್ ಮೂಲಕ ಈ ಸೀರೆಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಿದರು. ಸದ್ಯ ಸೇವಾ ಭಾರತಿಯ ಶ್ರಮದಿಂದ ಬೆಳಗಾವಿಯ ಶಹಾಪುರ ಸೀರೆಗಳು ವಿದೇಶದಲ್ಲಿಯೂ ನಳನಳಿಸುವಂತಾಗಿದೆ. ನೇಕಾರರಿಗೂ ಆರ್ಥಿಕ ಭದ್ರತೆ ಒದಗಿಸಿಕೊಳ್ಳಲು ಸಹಾಯಕವಾಗಿದೆ.
ಅಮೆರಿಕಕ್ಕೆ ಶಹಾಪುರ ಸೀರೆ ಕಳುಹಿಸಿದ ನೇಕಾರ ಉಮೇಶ್ ಕೊಕಡೊಳ್ಳಿ ಅವರ ಮನೆಗೆ ಸೇವಾ ಕಾರ್ಟ್ ತಂಡದ ಚೈತನ್ಯ ಕುಲಕರ್ಣಿ, ಸಚಿನ್ ಸಬನೀಸ್ ಮೊದಲಾದವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.