ಲಡಾಖ್: ಗಡಿಯ ಚುಮಾರ್-ಡೆಂಚೋಕ್ ಪ್ರದೇಶದಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ ಚೀನಾದ ಯೋಧರೊಬ್ಬರನ್ನು ಭಾರತೀಯ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ.
ಕಣ್ತಪ್ಪಿನಿಂದಾಗಿ ಚೀನಾದ ಯೋಧ ಭಾರತದ ಗಡಿಯೊಳಕ್ಕೆ ಬಂದಿರಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಆತನ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಿ, ನಿಯಮಗಳಿಗೆ ಅನುಗುಣವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಬಳಿಕ ಆತನನ್ನು ಚೀನಾಗೆ ಒಪ್ಪಿಸುವ ಬಗ್ಗೆಯೂ ಸೇನೆಯ ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ಈತ ಪೂರ್ವ ಲಡಾಖ್ನ ಎಲ್ಒಸಿ ದಾಟುತ್ತಿದ್ದ ಸಂದರ್ಭದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಯೋಧನನ್ನು ಕಾರ್ಪೊರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ.
ಇನ್ನು ನಾಪತ್ತೆಯಾದ ಯೋಧನ ಸುಳಿವು ಪತ್ತೆಗಾಗಿ ಚೀನಾ ಸೇನೆಯೂ ಮನವಿ ಸಲ್ಲಿಸಿದ್ದು, ಪ್ರಕ್ರಿಯೆಗಳೆಲ್ಲವನ್ನು ಪೂರ್ಣ ಗೊಳಿಸಿ ಬಳಿಕ ಆತನನ್ನು ಚೀನಾಗೆ ಮರಳಿಸುವುದಾಗಿಯೂ ಭಾರತದ ಸೇನೆ ತಿಳಿಸಿದೆ. ಚಳಿ ಹೆಚ್ಚಿರುವ ಕಾರಣ ವಶಕ್ಕೆ ಪಡೆಯಲಾದ ಚೀನಾ ಯೋಧನಿಗೆ ಭಾರತೀಯ ಸೇನೆ ಸೂಕ್ತ ವೈದ್ಯಕೀಯ ಸಹಕಾರ, ಆಹಾರ, ಬೆಚ್ಚಗಿನ ಉಡುಪು ನೀಡಿ ಮಾನವೀಯತೆ ಮೆರೆದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.