ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯತ್ತ ಮುಖಮಾಡಿರುವ ಯುವಕರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರವು ಶರಣಾಗತಿ ಮತ್ತು ಪುನರ್ವಸತಿ ನೀತಿಯನ್ನು ಕಾಶ್ಮೀರಿ ಯುವಕರಿಗಾಗಿ ರೂಪಿಸುತ್ತಿದೆ.
ಶಸ್ತ್ರವನ್ನು ಕೈಗೆತ್ತಿಕೊಂಡ ಯುವಕರನ್ನು ಶರಣಾಗತಿ ಪಡೆಯುವಂತೆ ಮಾಡಿ, ಆ ಮೂಲಕ ಅವರಿಗೆ ಪುನರ್ವಸತಿಯನ್ನು ಸಮಾಜದಲ್ಲಿ ಕಲ್ಪಿಸುವ ಸಲುವಾಗಿ ನೀತಿಯನ್ನು ತರಲಾಗುತ್ತದೆ ಎಂದು 15 ಕಾರ್ಪ್ಸ್ ಜಿಒಸಿ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಹೇಳಿದ್ದಾರೆ.
ಹೆಚ್ಚಿನ ಶರಣಾಗತಿ ನಡೆಯುವಂತೆ ಮಾಡುವ ಸಲುವಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಶಸ್ತ್ರ ಕೈಗೆತ್ತಿಕೊಂಡ ಯುವಕರನ್ನು ಹತ್ಯೆ ಮಾಡುವುದು ಸೇನೆಯ ಆದ್ಯತೆ ಅಲ್ಲ, ಅವರಲ್ಲಿ ಪರಿವರ್ತನೆ ತರಲು ಸೇನೆ ಶ್ರಮಿಸುತ್ತದೆ ಎಂದಿದ್ದಾರೆ.
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನಮ್ಮ ಯೋಧರು ಭಯೋತ್ಪಾದಕರ ಮನವೊಲಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.
ಸರ್ಕಾರ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯ ಈ ವಿಷಯದತ್ತ ಗಮನಹರಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.