ನವದೆಹಲಿ: ಕೈಮಗ್ಗವನ್ನು ಜನಪ್ರಿಯಗೊಳಿಸಿ, ನೇಕಾರರ ಬದುಕನ್ನು ಹಸನುಗೊಳಿಸುವ ಮಹತ್ವದ ಆಶಯವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಿದ್ದಾರೆ.
1905ರ ಆಗಸ್ಟ್ 7 ರಂದು ಸ್ವದೇಶಿ ಚಳುವಳಿ ದೇಶದಲ್ಲಿ ಆರಂಭವಾಗಿತ್ತು, ಇದರ ಸ್ಮರಣಾರ್ಥ ಅದೇ ದಿನ ಚೆನ್ನೈನಲ್ಲಿ ಬೃಹತ್ ಸಮಾರಂಭ ನಡೆಯಲಿದ್ದು, ಅಲ್ಲಿ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಾಗುತ್ತದೆ. ಭಾರತೀಯ ಕೈಮಗ್ಗ ಬ್ರ್ಯಾಂಡನ್ನು ಇಲ್ಲಿ ಅನಾವರಣಗೊಳಿಸಲಾಗುತ್ತದೆ.
ಅತ್ಯಧಿಕ ಭಾರತೀಯರು ನೇಕಾರಿಕೆಯಲ್ಲಿ ತೊಡಗಿರುವ ಪ್ರದೇಶದಲ್ಲಿ ಮೋದಿ ಈ ಸಮಾರಂಭವನ್ನು ನಡೆಸಲು ಉದ್ದೇಶಿಸಿದ್ದರು, ಅದಕ್ಕಾಗಿ ನಾವು ಚೆನ್ನೈಯನ್ನು ಆಯ್ಕೆ ಮಾಡಿದೆವು ಎಂದು ಕೇಂದ್ರ ಜವಳಿ ಖಾತೆ ಸಚಿವ ಸಂತೋಷ್ ಗಂಗಾವಾರ್ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಜವಳಿ ವಲಯ ತೆಗೆದುಕೊಂಡು ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಪ್ರದರ್ಶನಗಳನ್ನೂ ಈ ಸಮಾರಂಭದಲ್ಲಿ ಏರ್ಪಡಿಸಲಾಗುತ್ತಿದೆ. ಗ್ರಾಹಕರಿಗೆ ಕೈಮಗ್ಗದ ಗುಣಮಟ್ಟದ ಭರವಸೆ ನೀಡುವ ಸಲುವಾಗಿ ಭಾರತೀಯ ಕೈಮಗ್ಗ ಬ್ರ್ಯಾಂಡ್ ಅನಾವರಣಗೊಳ್ಳಲಿದೆ.
ನೇಕಾರರಿಗೆ ನೀಡಲಾಗುವ 2012, 2013 ಮತ್ತು 2014ರ ಸಾಲಿನ ಸಂತ್ ಕಬೀತ್ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಇಲ್ಲಿ ವಿತರಿಸಲಾಗುತ್ತದೆ.
ಕೈಮಗ್ಗದ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಸುವ ಸಲುವಾಗಿ, ನೇಕಾರರ ಜೀವನವನ್ನು ಸುಧಾರಿಸುವ ಸಲುವಾಗಿ ಮತ್ತು ನಮ್ಮ ಶ್ರೀಮಂತ ಪರಂಪರೆಯನ್ನು ಉಳಿಸುವ ಸಲುವಾಗಿ ಈ ರಾಷ್ಟ್ರೀಯ ಕೈಮಗ್ಗ ದಿನ ಸಹಾಯಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.