ಬೆಂಗಳೂರು: ಕೈಗಾರಿಕಾ ವಲಯಕ್ಕೆ ಸಂಬಂಧಿಸಿದಂತೆ 2020 ರ ಜನವರಿ – ಜೂನ್ ತಿಂಗಳುಗಳ ನಡುವೆ ಕರ್ನಾಟಕ ರಾಜ್ಯ 24 ಸಾವಿರ ಕೋಟಿಗೂ ಅಧಿಕ ವಿದೇಶಿ ನೇರ ಹೂಡಿಕೆಯನ್ನು ಸೆಳೆದಿದೆ.
ದೇಶದಲ್ಲೇ ವಿದೇಶಿ ನೇರ ಹೂಡಿಕೆ ವಿಚಾರದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಕೊರೋನಾ ಲಾಕ್ಡೌನ್ ಅವಧಿಯಲ್ಲಿಯೂ ಕೈಗಾರಿಕಾ ವಲಯದಲ್ಲಿ ರಾಜ್ಯ ಅತ್ಯಧಿಕ ವಿದೇಶೀ ಹೂಡಿಕೆ ಸೆಳೆಯುವ ಮೂಲಕ ಸಾಧನೆ ಮೆರೆದಿದೆ. ಎಪ್ರಿಲ್-ಜೂನ್ ನಡುವೆ ಕರ್ನಾಟಕ ಸುಮಾರು 10,255 ಕೋಟಿ ರೂ. ಗಳಷ್ಟು ಹೂಡಿಕೆ ಸೆಳೆದಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬಿಡುಗಡೆ ಮಾಡಿರುವ ಎಫ್ಡಿಐ ವರದಿಯ ಪ್ರಕಾರ, 2019ರ ಅಕ್ಟೋಬರ್ ತಿಂಗಳಿನಿಂದ ತೊಡಗಿ 2020ರ ಜೂನ್ ನಡುವೆ ದೇಶದಲ್ಲಿ 2.2 ಲಕ್ಷ ಕೋಟಿ ರೂ. ಗಳಷ್ಟು ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಒಟ್ಟಿನಲ್ಲಿ ಕರ್ನಾಟಕ ಕೊರೋನಾ ಸಂಕಷ್ಟದ ಅವಧಿಯಲ್ಲಿಯು ದೇಶೀಯ ಮತ್ತು ವಿದೇಶೀ ನೇರ ಹೂಡಿಕೆಯನ್ನು ಹೆಚ್ಚೆಚ್ಚು ಸೆಳೆಯುವ ಮೂಲಕ ಕೈಗಾರಿಕಾ ವಲಯದಲ್ಲಿ ಮಹತ್ವದ ದಾಖಲೆ ಬರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.