ಬೆಂಗಳೂರು: ಸರ್ಕಾರಿ ಕಛೇರಿಗಳ ಅಭಿವೃದ್ಧಿಯ ಭಾಗವಾಗಿ ಬೆಂಗಳೂರು ನಗರದ ಟ್ರಾಫಿಕ್ ಪೊಲೀಸರಿಗೆ ಸುಮಾರು 1.5 ಕೋಟಿ ರೂ. ಗಳಲ್ಲಿ 150 ಬಾಡಿ ಕ್ಯಾಮೆರಾಗಳನ್ನು ಪೂರೈಸಲು ನಿರ್ಧರಿಸಲಾಗಿದೆ.
ಈ ಕ್ಯಾಮೆರಾಗಳು ಹೆಚ್ಚು ರೆಸೊಲ್ಯೂಷನ್ ಹೊಂದಿದ್ದು, ಶರ್ಟ್ ಗುಂಡಿಗೆ ಕ್ಯಾಮೆರಾ ಅಳವಡಿಸಿಕೊಳ್ಳುವ ಮೂಲಕ ಟ್ರಾಫಿಕ್ ನಿಯಮ ಪಾಲನೆಗಳ ಮೇಲೆ ಹೆಚ್ಚು ನಿಗಾ ವಹಿಸಲು ಸಾಧ್ಯವಾಗುವಂತೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಆಯುಕ್ತರಾದ ನಿಶಾ ಜೇಮ್ಸ್ ತಿಳಿಸಿದ್ದಾರೆ.
ವಾಹನ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ನಿಗಾ ವಹಿಸಲು ಈ ಕ್ಯಾಮೆರಾಗಳು ಪೂರಕವಾಗಿ ಕೆಲಸ ಮಾಡಲಿವೆ. ಹಾಗೆಯೇ ಈ ಕ್ಯಾಮೆರಾಗಳನ್ನು ಸತತ 8 ಗಂಟೆಗಳ ಕಾಲ ಉಪಯೋಗ ಮಾಡಬಹುದಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದ್ದು, ಈ ಕ್ಯಾಮೆರಾಗಳು ಮುಂದಿನ ಮೂರು ತಿಂಗಳಲ್ಲಿಯೇ ಪೊಲೀಸರ ಬಳಕೆಗೆ ಲಭ್ಯವಾಗಲಿವೆ. ಈ ಕ್ಯಾಮೆರಾಗಳಲ್ಲಿ ಬ್ಲೂಟೂತ್ ಸೇರಿದಂತೆ ಇನ್ನೂ ಅನೇಕ ಅತ್ಯಾಧುನಿಕ ವ್ಯವಸ್ಥೆಗಳಿವೆ. ಬುಲೆಟ್ ಬಾಡಿ ವೋರ್ನ್, ಬಟನ್ ಬಾಡಿ ವೋರ್ನ್ ಎಂಬ ಎರಡು ವ್ಯವಸ್ಥೆಗಳನ್ನು ಈ ಕ್ಯಾಮರಾ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.