ನವದೆಹಲಿ: ಕೊರೊನಾವೈರಸ್ ತಡೆಗಟ್ಟುವ ಸಲುವಾಗಿ ಭಾರತ ಹೊರತಂದಿರುವ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಶ್ಲಾಘಿಸಿದ್ದಾರೆ. ಸೋಂಕು ಉಲ್ಬಣಗೊಳ್ಳುವ ಪ್ರದೇಶಗಳನ್ನು ಗುರುತಿಸಲು ಈ ಅಪ್ಲಿಕೇಶನ್ ನಗರ ಸಾರ್ವಜನಿಕ ಆರೋಗ್ಯ ಇಲಾಖೆಗಳಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.
ಡಬ್ಲ್ಯುಎಚ್ಒ ಪೂರ್ವ ಮೆಡಿಟರೇನಿಯನ್ನ ಪ್ರಾದೇಶಿಕ ಸಮಿತಿಯಲ್ಲಿ ಮಾತನಾಡಿದ ಘೆಬ್ರೆಯೆಸಸ್, ಆರೋಗ್ಯಾ ಸೇತು ಅಪ್ಲಿಕೇಶನ್ ಕೊರೋನಾ ಪರೀಕ್ಷೆಯನ್ನು ಉದ್ದೇಶಿತ ರೀತಿಯಲ್ಲಿ ವಿಸ್ತರಿಸಿದೆ ಎಂದು ಹೇಳಿದರು. ಆರೋಗ್ಯಾ ಸೇತು ವಿಶ್ವದ ಅತಿದೊಡ್ಡ ಕೋವಿಡ್-19 ಕಾಂಟ್ಯಾಕ್ಟ್ ಟ್ರೇಸಿಂಗ್ ಅಪ್ಲಿಕೇಶನ್ ಆಗಿದೆ.
“ಭಾರತದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು 150 ಮಿಲಿಯನ್ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ ಮತ್ತು ಕ್ಲಸ್ಟರ್ಗಳನ್ನು ನಿರೀಕ್ಷಿಸಬಹುದಾದ ಪ್ರದೇಶಗಳನ್ನು ಗುರುತಿಸಲು ಮತ್ತು ಉದ್ದೇಶಿತ ರೀತಿಯಲ್ಲಿ ಪರೀಕ್ಷೆಯನ್ನು ವಿಸ್ತರಿಸಲು ನಗರದ ಸಾರ್ವಜನಿಕ ಆರೋಗ್ಯ ಇಲಾಖೆಗಳಿಗೆ ಇದು ಸಹಾಯ ಮಾಡಿದೆ” ಎಂದಿದ್ದಾರೆ.
Media briefing on #COVID19 with @DrTedros https://t.co/Y9iksROouM
— World Health Organization (WHO) (@WHO) October 12, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.