ನವದೆಹಲಿ: ಪುಟ್ಟ ರಾಷ್ಟ್ರ ತೈವಾನ್ ಇಂದು ತನ್ನ ರಾಷ್ಟ್ರೀಯ ದಿನವನ್ನು ಅಚರಣೆ ಮಾಡುತ್ತಿದೆ. ದೈತ್ಯ ಚೀನಾಗೆ ಸೆಡ್ಡು ನೀಡುತ್ತಿರುವ ಆ ದೇಶ ಈಗ ಭಾರತೀಯರ ಫೇವರೇಟ್ ಎನಿಸಿಕೊಂಡಿದೆ.
ದೆಹಲಿಯ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತೈವಾನ್ ರಾಷ್ಟ್ರೀಯ ದಿನಾಚರಣೆಯ ಹಿನ್ನೆಲೆಯಲ್ಲಿ ದೆಹಲಿಯ ಚೀನಾ ರಾಯಭಾರ ಕಛೇರಿಯ ಮುಂದು ಗಡೆ ತೈವಾನ್ಗೆ ಶುಭಕೋರಿ ಪೋಸ್ಟರ್ ಹಾಕಿದ್ದಾರೆ.
ತೈವಾನ್ ರಾಷ್ಟ್ರೀಯ ದಿನಾಚರಣೆಯ ಮುನ್ನ ಏಕ-ಚೀನಾ ನೀತಿಯನ್ನು ಅನುಸರಿಸುವಂತೆ ಚೀನಾದ ರಾಯಭಾರ ಕಚೇರಿ ಭಾರತೀಯ ಮಾಧ್ಯಮಗಳಿಗೆ ಸಲಹೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ತೈವಾನ್ ತನ್ನ ‘ರಾಷ್ಟ್ರೀಯ ದಿನ’ಕ್ಕೆ ಶುಭ ಕೋರುವ ನೂರಾರು ಪೋಸ್ಟರ್ಗಳು ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಚೀನೀ ರಾಯಭಾರ ಸಂಕೀರ್ಣದ ಹೊರಗೆ ಕಂಡು ಬಂದಿವೆ. ಈ ಪೋಸ್ಟರ್ಗಳನ್ನು ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಹಾಕಿದ್ದಾರೆ.
#TaiwanNationalDay pic.twitter.com/EX2W6YmJzk
— Tajinder Pal Singh Bagga (@TajinderBagga) October 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.