ನವದೆಹಲಿ: ಭಾರತ-ಚೀನಾ ನಡುವೆ 7 ನೇ ಸುತ್ತಿನ ಎಲ್ಎಸಿ ಮಾತುಕತೆ ನಡೆಯುವುದಕ್ಕೂ ಮುಂಚೆಯೇ ದೊಡ್ಡ ಮಟ್ಟದ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ನವೆಂಬರ್ 17 ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಲಿದ್ದಾರೆ.
ಗಾಲ್ವಾನ್ನಲ್ಲಿ ಎಲ್ಎಸಿ ಉದ್ದಕ್ಕೂ ಭಾರತ-ಚೀನಾ ನಡುವಿನ ಘರ್ಷಣೆಯಿಂದ 20 ಸೈನಿಕರು ಹುತಾತ್ಮರಾದ ಬಳಿಕ ಉಭಯ ದೇಶದ ಮುಖ್ಯಸ್ಥರ ನಡುವೆ ನಡೆಯುತ್ತಿರುವ ಮೊದಲ ಸಂವಾದ ಇದಾಗಿದೆ . ಎಲ್ಎಸಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಇನ್ನೂ ಯಾವುದೇ ಪ್ರಗತಿ ಸಂಭವಿಸಿಲ್ಲ, ಆದರೆ ಸೆಪ್ಟೆಂಬರ್ 10 ರಿಂದ ಐದು ಅಂಶಗಳ ಒಮ್ಮತವನ್ನು ತಲುಪಿದ ನಂತರ ಯಾವುದೇ ಪ್ರಚೋದನಕಾರಿ ಕ್ರಮಗಳು ಗಡಿಯಲ್ಲಿ ಸೃಷ್ಟಿಯಾಗಿಲ್ಲ.
ಅಕ್ಟೋಬರ್ 12 ರಂದು ಕಾರ್ಪ್ಸ್ ಕಮಾಂಡರ್ಗಳ ನಡುವಿನ 7 ನೇ ಸುತ್ತಿನ ಮಾತುಕತೆಗೂ ಮುನ್ನ ಈ ಬೆಳವಣಿಗೆ ನಡೆದಿದೆ. ಆರು ಸುತ್ತಿನ ಮಿಲಿಟರಿ ಮಾತುಕತೆ ಮತ್ತು ಐದು ಸುತ್ತಿನ ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್ ಆನ್ ಇಂಡಿಯಾ-ಚೀನಾ ಬಾರ್ಡರ್ ಅಫೇರ್ಸ್ (ಡಬ್ಲ್ಯುಎಂಸಿಸಿ) ಮಾತುಕತೆಗಳ ನಂತರ ಇದೀಗ ಉಭಯ ದೇಶಗಳ ನಾಯಕರ ನಡುವೆ ಮಾತುಕತೆ ನಡೆಯುತ್ತಿದೆ.
ಗಡಿಯಲ್ಲಿ ಉಭಯ ದೇಶಗಳೂ ತಮ್ಮ ಬಲವನ್ನು ಹೆಚ್ಚಳಗೊಳಿಸುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಅವರು ನಿನ್ನೆ ಹೇಳಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.